ಪರಂಪರಾಗತ ಹೆಜ್ಜೆಯನ್ನು ಮರೆಯದ ದುಬೈ: ಇಫ್ತಾರ್ ನ ಸಮಯವನ್ನು ತಿಳಿಯಲು ಫಿರಂಗಿಗಳ ಬಳಕೆ

ದುಬೈ ಎಷ್ಟೇ ಆಧುನಿಕತೆಗೆ ತೆರೆದುಕೊಂಡಿರಲಿ ಅದು ತನ್ನ ಪರಂಪರಾಗತ ಹೆಜ್ಜೆಯನ್ನು ಮರೆತಿಲ್ಲ. ಇಂದಿನ ಆಧುನಿಕ ತಂತ್ರಜ್ಞಾನಕ್ಕಿಂತ ಮೊದಲು ಅರಬ್ ರಾಷ್ಟ್ರಗಳಲ್ಲಿ ಇಫ್ತಾರ್ ನ ಸಮಯವನ್ನು ತಿಳಿಸುವುದಕ್ಕಾಗಿ ಫಿರಂಗಿಗಳನ್ನು ಬಳಸಲಾಗುತ್ತಿತ್ತು. ಆದರೆ ಈ ಆಧುನಿಕ ಯುಗದಲ್ಲೂ ಅಬುದಾಬಿಯಲ್ಲಿ ಫಿರಂಗಿಗಳು ಮೊಳಗುತ್ತವೆ.
ಯುದ್ಧದ ಸಂದರ್ಭದಲ್ಲಿ ಬಳಕೆಯಾಗುತ್ತಿದ್ದ ಫಿರಂಗಿಯನ್ನು ಈಗ ಇಫ್ತಾರ್ ನ ಸಮಯವನ್ನು ತಿಳಿಸುವುದಕ್ಕಾಗಿ ಸಿಡಿಸಲಾಗುತ್ತಿದೆ. ಪ್ರತಿ ಮನೆಯಲ್ಲಿ ಸಮಯವನ್ನು ತಿಳಿಸುವುದಕ್ಕಾಗಿ ಮೊಬೈಲ್ ಇದ್ದರೂ ಮತ್ತು ಮಸೀದಿಯಿಂದ ಆದಾನ್ ಕೇಳಿಸುವ ವ್ಯವಸ್ಥೆ ಇದ್ದರೂ ಅಬುಧಾಬಿ ತನ್ನ ಹಳೆ ಕಾಲದ ಆ ನೆನಪನ್ನು ಮರೆತಿಲ್ಲ ಮತ್ತು ಹಳೆ ಕಾಲದ ಫಿರಂಗಿ ಸಿಡಿಸುವ ಪರಂಪರೆಯನ್ನು ಕೈ ಬಿಟ್ಟಿಲ್ಲ.
ಈ ಹಿಂದೆ ಆಡಳಿತಗಾರರ ನಿರ್ದೇಶನದಂತೆ ರಮ ಝಾನ್ ಬಾಲಚಂದ್ರ ಕಾಣಿಸಿಕೊಂಡಾಗ ಮತ್ತು ರಮ ಝಾನ್ ಮುಗಿದು ಹಬ್ಬದ ಚಂದಿರ ಕಾಣಿಸಿಕೊಂಡಾಗ ಅಲ್ ಮಕ್ತಾ ಟವರ್ ನಿಂದ ಈ ಫಿರಂಗಿಯನ್ನು ಸಿಡಿಸಲಾಗುತ್ತಿತ್ತು. ಆದರೆ ಇದೀಗ ಈ ನಿಯಮವನ್ನು ಬದಲಿಸಲಾಗಿದೆ. ರಮಜಾನ್ ತಿಂಗಳ ಉದ್ದಕ್ಕೂ ಇಫ್ತಾರ್ ಸಮಯದ ಬಗ್ಗೆ ಜನರಿಗೆ ತಿಳಿಸುವುದಕ್ಕೆ ಈ ಫಿರಂಗಿಯನ್ನು ಸಿಡಿಸಲಾಗುತ್ತಿದೆ. ಮುಂದಿನ ಪೀಳಿಗೆಗೆ ಯು ಏ ಇ ಪರಂಪರೆಯನ್ನು ತಿಳಿಸುವುದೇ ಈ ಸಿಡಿತದ ಉದ್ದೇಶ ಎಂದು ಹೇಳಲಾಗಿದೆ.
ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 9686399493 ನಂಬರ್ ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ:
https://chat.whatsapp.com/BHOOdLNNvmD17cBJslQgwj