ಅಂಚೆ ಬ್ಯಾಂಕ್ ನೇಮಕಾತಿ : ಆಯ್ಕೆಯಾದವರಿಗೆ 30 ಸಾವಿರ ಆರಂಭಿಕ ವೇತನ - Mahanayaka

ಅಂಚೆ ಬ್ಯಾಂಕ್ ನೇಮಕಾತಿ : ಆಯ್ಕೆಯಾದವರಿಗೆ 30 ಸಾವಿರ ಆರಂಭಿಕ ವೇತನ

indian post payment bank
12/03/2025

IPPB Recruitment 2025 – Indian Post Payment Bank Recruitment : ಭಾರತೀಯ ಅಂಚೆ ಬ್ಯಾಂಕ್ ನಲ್ಲಿ ಖಾಲಿ ಇರುವ ವಿವಿಧ ಹುದ್ದೆಗಳನ್ನು ನೇಮಕಾತಿ ಮಾಡಿಕೊಳ್ಳಲಾಗುತ್ತಿದ್ದು, ಇದಕ್ಕಾಗಿ ಅಧಿಸೂಚನೆ ಹೊರಡಿಸಲಾಗಿದೆ.

ಭಾರತ ದೇಶಾದ್ಯಂತ ಅಂಚೆ ಬ್ಯಾಂಕ್ ನಲ್ಲಿ ಕಾರ್ಯ ನಿರ್ವಾಹಕ ಹುದ್ದೆಗಳನ್ನು ನೇಮಕಾತಿ ಮಾಡಿಕೊಳ್ಳಲಾಗುತ್ತಿದೆ. ಅಧಿಕೃತ ಅಧಿಸೂಚನೆಯ ಪ್ರಕಾರ ಈ ನೇಮಕಾತಿಗೆ ಸಂಬಂದಿಸಿದ ಅಧಿಕೃತ ಮಾಹಿತಿಯನ್ನು ಇಲ್ಲಿ ನೀಡಲಾಗಿದ್ದು, ಇದರ ಸದುಪಯೋಗ ಪಡೆದುಕೊಳ್ಳಿ.

ಅಂಚೆ ಬ್ಯಾಂಕ್ ನೇಮಕಾತಿ ವಿವರ :


Provided by

ಭಾರತ ದೇಶಾದ್ಯಂತ ಅಂಚೆ ಬ್ಯಾಂಕ್ ನಲ್ಲಿ ಒಟ್ಟು 51 ಕಾರ್ಯನಿರ್ವಾಹಕ ಹುದ್ದೆಗಳು ಖಾಲಿ ಇವೆ. ಯಾವ ರಾಜ್ಯದಲ್ಲಿ ಎಷ್ಟು ಹುದ್ದೆಗಳು ಖಾಲಿ ಇವೆ ಎಂಬುದನ್ನು ತಿಳಿದುಕೊಳ್ಳಲು ಅಧಿಕೃತ ಅಧಿಸೂಚನೆ ಪರಿಶೀಲಿಸಿ.

 ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಅರ್ಹತೆಗಳು :

ಕಾರ್ಯನಿರ್ವಾಹಕ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಅಂಗಿಕೃತ ವಿಶ್ವವಿದ್ಯಾಲಯದಿಂದ ಪದವಿ ಶಿಕ್ಷಣ ಮುಗಿಸಿರಬೇಕು. ವಯೋಮಿತಿ ಕನಿಷ್ಠ 21 ರಿಂದ 35 ವರ್ಷದ ಒಳಗಿರಬೇಕು.

ಆಯ್ಕೆಯಾದ ನಂತರ ಸಿಗುವ ವೇತನ ಶ್ರೇಣಿ : 30,000ರೂ.

ಅರ್ಜಿ ಶುಲ್ಕ :

* ಪರಿಶಿಷ್ಟ ವರ್ಗದವರಿಗೆ ಹಾಗೂ ಅಂಗವಿಕಲ ಅಭ್ಯರ್ಥಿಗಳಿಗೆ – 150ರೂ.

* ಇನ್ನುಳಿದ ಎಲ್ಲಾ ವರ್ಗದ ಅಭ್ಯರ್ಥಿಗಳಿಗೆ – 750ರೂ.

ನೇಮಕಾತಿಗೆ ಸಂಬಂದಿಸಿದ ಪ್ರಮುಖ ದಿನಾಂಕಗಳು :

* ಆನ್ಲೈನ್ ಮುಕಾಂತರ ಅರ್ಜಿ ಸಲ್ಲಿಕೆ ಆರಂಭವಾದ ದಿನಾಂಕ – 01/03/2025

* ಆನ್ಲೈನ್ ಮುಕಾಂತರ ಅರ್ಜಿ ಸಲ್ಲಿಕೆಗೆ ಕೊನೆಯ ದಿನಾಂಕ – 21/03/2025

ಅರ್ಜಿ ಸಲ್ಲಿಸುವ ಲಿಂಕ್:  https://www.ippbonline.com/web/ippb/current-openings


ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 9686399493ನಂಬರ್ ಸೇರಿಸಿ.

ಗ್ರೂಪ್ ಗೆ ಜಾಯಿನ್ ಆಗಿ:

https://chat.whatsapp.com/BR3b3qhWZWaCzpD1m6N5uu

ಇತ್ತೀಚಿನ ಸುದ್ದಿ