ಇಸ್ರೇಲ್ ಗಾಗಿ ಅಮೆರಿಕನ್ನರ ಬೆಂಬಲದಲ್ಲಿ ಭಾರೀ ಪ್ರಮಾಣದಲ್ಲಿ ಕುಸಿತ: ಹೊಸ ಸರ್ವೇ

ಇಸ್ರೇಲ್ ಗಾಗಿ ಅಮೆರಿಕನ್ನರ ಬೆಂಬಲದಲ್ಲಿ ಭಾರಿ ಪ್ರಮಾಣದಲ್ಲಿ ಕುಸಿತ ಉಂಟಾಗಿದೆ ಎಂದು ಹೊಸ ಸರ್ವೆ ಸ್ಪಷ್ಟಪಡಿಸಿದೆ. ಹೊಸ ಸರ್ವೆ ಪ್ರಕಾರ 46 ಶೇಕಡ ಅಮೆರಿಕನ್ನರು ಮಾತ್ರ ಇಸ್ರೇಲನ್ನು ಬೆಂಬಲಿಸುತ್ತಿದ್ದಾರೆ. ಇದೇ ವೇಳೆ ಇದು 25 ವರ್ಷಗಳಲ್ಲೇ ಅತ್ಯಂತ ಕಡಿಮೆ ಬೆಂಬಲವಾಗಿದೆ ಎಂದು ಹೇಳಲಾಗಿದೆ.
2024ರಲ್ಲಿ ಇಂಥದ್ದೇ ಸರ್ವೇ ನಡೆಸಲಾಗಿತ್ತು ಮತ್ತು ಆಗ 51 ಶೇಕಡ ಅಮೆರಿಕನ್ನರು ಇಸ್ರೇಲನ್ನು ಬೆಂಬಲಿಸಿದ್ದರು. ಇದೇ ವೇಳೆ 33 ಶೇಕಡ ಅಮೆರಿಕನ್ನರು ಫೆಲಸ್ತೀನಿ ಗೆ ಬೆಂಬಲ ಸರಿದ್ದಾರೆ. 2024ರಲ್ಲಿ ಇದು 27 ಶೇಕಡಾ ಮಾತ್ರ ಆಗಿತ್ತು
2025 ಜನವರಿ 19ರಂದು ಜಾರಿಗೆ ಬಂದ ಇಸ್ರೇಲ್ ಮತ್ತು ಹಮಾಸ್ ನಡುವಿನ ಕದನ ವಿರಾಮ ಒಪ್ಪಂದ ಮತ್ತು ಒತ್ತೆಯಾಳುಗಳು ಮತ್ತು ಕೈದಿಗಳ ವಿನಿಮಯದ ಸಂದರ್ಭದಲ್ಲಿ ಈ ಸರ್ವೇಯನ್ನು ನಡೆಸಲಾಗಿತ್ತು ಎಂದು ತಿಳಿದುಬಂದಿದೆ.
ಇದೇ ವೇಳೆ ಇಸ್ರೇಲ್ ಮತ್ತು ಫೆಲೆಸ್ತೀನ್ ನಡುವಿನ ಸಮಸ್ಯೆಯನ್ನು ಟ್ರಂಪ್ ನಿರ್ವಹಿಸುತ್ತಿರುವ ರೀತಿಗೆ 40 ಶೇಕಡಾ ಅಮೆರಿಕನ್ನರು ಬೆಂಬಲ ಸಾರಿದ್ದಾರೆ. ಕದನ ವಿರಾಮ ಒಪ್ಪಂದಕ್ಕೆ ಟ್ರಂಪ್ ಸಹಕಾರ ನೀಡಿರುವುದಕ್ಕಾಗಿ ಈ ಬೆಂಬಲ ಲಭ್ಯವಾಗಿದೆ ಎಂದು ಕೂಡ ತಿಳಿಸಲಾಗಿದೆ.
ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 9686399493 ನಂಬರ್ ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ:
https://chat.whatsapp.com/BHOOdLNNvmD17cBJslQgwj