ಟ್ರಕ್ ಮತ್ತು ಟಾಟಾ ಏಸ್ ಗಾಡಿ ಮುಖಾಮುಖಿ ಡಿಕ್ಕಿ: ಓರ್ವ ಸಾವು - Mahanayaka
5:23 AM Wednesday 11 - December 2024

ಟ್ರಕ್ ಮತ್ತು ಟಾಟಾ ಏಸ್ ಗಾಡಿ ಮುಖಾಮುಖಿ ಡಿಕ್ಕಿ: ಓರ್ವ ಸಾವು

uppinangady
05/04/2021

ಉಪ್ಪಿನಂಗಡಿ: ಟ್ರಕ್ ಮತ್ತು ಟಾಟಾ ಏಸ್ ಗಾಡಿ ಮುಖಾಮುಖಿ ಡಿಕ್ಕಿಯಾದ ಪರಿಣಾಮ ವ್ಯಕ್ತಿಯೋರ್ವ ಮೃತಪಟ್ಟ ಘಟನೆ ಸೋಮವಾರ ನಡೆದಿದ್ದು, ಇಬ್ಬರು ಗಾಯಗೊಂಡಿದ್ದಾರೆ.

ಎಳನೀರು ಹೇರಿಕೊಂಡು ಬರುತ್ತಿದ್ದ ಟ್ರಕ್ ಮತ್ತು ಹಾಸನಕ್ಕೆ ಬೀಡಿ ವ್ಯಾಪಾರಕ್ಕಾಗಿ ತೆರಳುತ್ತಿದ್ದ ಟಾಟಾಏಸ್ ಗಾಡಿ ನಡುವೆ  ಶಿರಾಡಿ ಗ್ರಾಮದ ಉದಾನೆ ಪರವರ ಕೊಟ್ಯ ಎಂಬಲ್ಲಿಅಪಘಾತ ಸಂಭವಿಸಿದೆ.

ಅಪಘಾತದಲ್ಲಿ ಬಂಟ್ವಾಳ ತಾಲೂಕಿನ ಕುಕ್ಕಾಜೆ ಮೂಲದ 56 ವರ್ಷ ವಯಸ್ಸಿನ ಹನೀಫ್  ಮೃತಪಟ್ಟಿದ್ದಾರೆ. ಟಾಟಾ ಏಸ್ ವಾಹನದಲ್ಲಿದ್ದ ರಫೀಕ್ ಮತ್ತು ಕರೀಮ್ ಎಂಬವರಿಗೆ ಗಾಯವಾಗಿದ್ದು, ಅವರನ್ನು ಆಸ್ಪತ್ರೆಗೆ  ದಾಖಲಿಸಲಾಗಿದೆ.

ಅಪಘಾತದಿಂದ ಗಂಭೀರವಾಗಿ ಗಾಯಗೊಂಡಿದ್ದ ಹನೀಫ್ ಅವರನ್ನು  ತಕ್ಷಣವೇ ಸ್ಥಳೀಯರು ಮಂಗಳೂರು ಆಸ್ಪತ್ರೆಗೆ ಕೊಂಡೊಯ್ದಿದ್ದಾರೆ. ಆದರೆ ಮಾರ್ಗ ಮಧ್ಯೆ ಅವರು ಸಾವನ್ನಪ್ಪಿದ್ದಾರೆ ಎಂದು ತಿಳಿದು ಬಂದಿದೆ.

ಇತ್ತೀಚಿನ ಸುದ್ದಿ