ಆಸ್ಪತ್ರೆ ಬೆಡ್ ಮೇಲೆ ಗ್ರಾ.ಪಂ. ಸದಸ್ಯನ ಜೊತೆ ಆಶಾ ಕಾರ್ಯಕರ್ತೆ ಸರಸ: ವಿಡಿಯೋ ವೈರಲ್
05/04/2021
ವಿಜಯವಾಡ: ಆಶಾ ಕಾರ್ಯಕರ್ತೆಯರು ಎಂದರೆ, ಜನರಿಗೆ ಎಲ್ಲಿಲ್ಲದ ಗೌರವವಿರುತ್ತದೆ. ಆದರೆ ಇಲ್ಲೊಬ್ಬಳು ಆಶಾ ಕಾರ್ಯಕರ್ತೆ ಮಾಡಿದ ಕೆಲಸದ ವಿರುದ್ಧ ವ್ಯಾಪಕ ಆಕ್ರೋಶ ವ್ಯಕ್ತವಾಗಿದ್ದು, ಆಶಾ ಕಾರ್ಯಕರ್ತೆಯರ ಹೆಸರಿಗೆ ಕಳಂಕ ತರುವ ಕೆಲಸ ಮಾಡಿದ್ದಾಳೆ.
ವಿಜಯಪುರ ಜಿಲ್ಲೆಯ ಇಂಡಿ ತಾಲೂಕಿನ ತಾಂಬಾದ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಆಶಾ ಕಾರ್ಯಕರ್ತೆ ಮತ್ತು ಗ್ರಾಮ ಪಂಚಾಯತ್ ಸದಸ್ಯನೋರ್ವ ಆಸ್ಪತ್ರೆ ಬೆಡ್ ಮೇಲೆಯೇ ಅಶ್ಲೀಲವಾಗಿ ನಡೆದುಕೊಂಡಿದ್ದು, ಈ ಸಂಬಂಧ ವಿಡಿಯೋವೊಂದು ವೈರಲ್ ಆಗಿದೆ.
ದೇವಪ್ಪ ಪೂಜಾರಿ ಎಂಬಾತ ವಿಡಿಯೋದಲ್ಲಿ ಇರುವ ವ್ಯಕ್ತಿ ಎಂದು ಹೇಳಲಾಗಿದ್ದು, ಈತ ಆಸ್ಪತ್ರೆ ಸಿಬ್ಬಂದಿ ಜೊತೆಗೆ ನಡೆಸಿದ ದೃಶ್ಯಗಳು ಸಿಸಿ ಟಿವಿಯಲ್ಲಿ ಸೆರೆಯಾಗಿದೆ. ಈ ಬಗ್ಗೆ ತನಿಖೆ ನಡೆಸಬೇಕು ಎಂದು ಗ್ರಾಮಸ್ಥರು ಆಗ್ರಹಿಸಿದ್ದಾರೆ.