ಅಕ್ರಮ ಮದ್ಯ ಮಾರಾಟ ದಾಳಿ: ಸಂಗ್ರಹಿಸಿಟ್ಟಿದ್ದ ಅಕ್ರಮ ಮದ್ಯ ವಶಕ್ಕೆ

ಮೂಡಿಗೆರೆ, ಜಿ.ಹೊಸಳ್ಳಿ: 14 ಮಾರ್ಚ್ ರಂದು ಜಿ.ಹೊಸಳ್ಳಿ ಗ್ರಾಮದ ಬುಡಕಟ್ಟು ಮಹಿಳಾ ಕೃಷಿಕ ಸಂಘದ ದೂರು ಮೇರೆಗೆ ಅಬಕಾರಿ ಅಧಿಕಾರಿಗಳು ಅಕ್ರಮ ಮದ್ಯ ಮಾರಾಟದ ವಿರುದ್ಧ ಕಾರ್ಯಾಚರಣೆ ನಡೆಸಿದ್ದಾರೆ.
ಕೃಷ್ಣಪ್ಪ ಬಿನ್ ಲೇಟ್ ಗಂಗಯ್ಯ ಅವರಿಗೆ ಸೇರಿದ “ನಮನ ಅಂಗಡಿ”ಯ ಮೇಲೆ ದಾಳಿ ನಡೆಸಿದಾಗ, ಅಕ್ರಮವಾಗಿ ಸಂಗ್ರಹಿಸಿಟ್ಟಿದ್ದ 6.750 ಲೀಟರ್ ಮದ್ಯ ಮತ್ತು 5.300 ಲೀಟರ್ ಬಿಯರ್ ಪತ್ತೆಯಾಗಿದೆ.
ಅಧಿಕೃತ ಪರವಾನಗಿ ಇಲ್ಲದೆ ಮದ್ಯ ಮಾರಾಟ ಮಾಡುತ್ತಿರುವುದನ್ನು ದೃಢಪಡಿಸಿದ ನಂತರ, ಅಬಕಾರಿ ಇಲಾಖೆ ಘೋರ ಪ್ರಕರಣವನ್ನು ದಾಖಲಿಸಿ ತನಿಖೆ ಮುಂದುವರಿಸಿದೆ. ಈ ದಾಳಿಯು ಗ್ರಾಮಸ್ಥರಲ್ಲಿ ಭಾರೀ ಚರ್ಚೆಗೆ ಕಾರಣವಾಗಿದ್ದು, ಮುಂದಿನ ದಿನಗಳಲ್ಲಿ ಅಧಿಕಾರಿಗಳು ಇನ್ನಷ್ಟು ಕ್ರಮ ಕೈಗೊಳ್ಳುವ ನಿರೀಕ್ಷೆಯಿದೆ.
ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 9686399493ನಂಬರ್ ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ:
https://chat.whatsapp.com/HEkqDgrW2BlJLad5kZ1DX7