ಸ್ವಾಮೀಜಿಯ ಕಾಲಿಗೆ ಬಿದ್ದು ಪೊಲೀಸ್ ಸಮವಸ್ತ್ರಕ್ಕೆ ಅವಮಾನ: ಪೊಲೀಸರ ವಿರುದ್ಧ ಶಿಸ್ತು ಕ್ರಮ - Mahanayaka

ಸ್ವಾಮೀಜಿಯ ಕಾಲಿಗೆ ಬಿದ್ದು ಪೊಲೀಸ್ ಸಮವಸ್ತ್ರಕ್ಕೆ ಅವಮಾನ: ಪೊಲೀಸರ ವಿರುದ್ಧ ಶಿಸ್ತು ಕ್ರಮ

bagalkot
15/03/2025

ಬಾಗಲಕೋಟೆ:  ಖಾಕಿ ಧರಿಸಿ ಸ್ವಾಮೀಜಿಯ ಕಾಲಿಗೆ ನಮಸ್ಕರಿಸಿ ಪೊಲೀಸ್ ಸಮವಸ್ತ್ರಗೆ ಅವಮಾನಿಸಿದ  ಪೊಲೀಸರ ವಿರುದ್ಧ ಗೃಹ ಇಲಾಖೆ ಶಿಸ್ತು ಕ್ರಮಕೈಗೊಂಡಿದೆ.


Provided by

ಹುನಗುಂಡ ತಾಲೂಕಿನ ಸಿದ್ದನಕೊಳ್ಳದ ಶಿವಕುಮಾರ ಸ್ವಾಮೀಜಿಗಳ ಕಾಲಿಗೆ ಪೊಲೀಸರು ಸಮವಸ್ತ್ರ ಧರಿಸಿಯೇ ನಮಸ್ಕರಿಸಿದ್ದಾರೆ. ಈ ವೇಳೆ ಸಮವಸ್ತ್ರದಲ್ಲಿ ಪೊಲೀಸರು ಕಾಲಿಗೆ ಬೀಳಬಾರದು ಸೆಲ್ಯೂಟ್ ಹೊಡೆಯ ಬೇಕು ಎಂದು ಸ್ವಾಮೀಜಿ ಹೇಳಿದ್ದರು. ಈ ವಿಡಿಯೋ ವೈರಲ್ ಆಗಿತ್ತು.

ಬಾಗಲಕೋಟೆ ಎಸ್ .ಪಿ.ಅಮರನಾಥ್ ರೆಡ್ಡಿ, ಹಾಗೂ ಇತರ ಪೊಲೀಸರು ಸಮವಸ್ತ್ರದಲ್ಲೇ ಸ್ವಾಮೀಜಿ ಕಾಲಿಗೆ ಬಿದ್ದು ನಮಸ್ಕಾರ ಮಾಡಿದ್ದಲ್ಲದೇ ಹಣರೂಪದಲ್ಲಿ ಆಶೀರ್ವಾದ ಪಡೆದ ಹಿನ್ನೆಲೆ 6 ಜನ ಪೊಲೀಸರ ವಿರುದ್ಧ ಶಿಸ್ತು ಕ್ರಮಕೈಗೊಳ್ಳಲಾಗಿದ್ದು, ವರ್ಗಾವಣೆ ಮಾಡಿ ಕ್ರಮಕೈಗೊಳ್ಳಲಾಗಿದೆ.


Provided by

ಬಾದಾಮಿ ಎಎಸ್ ಐ ಜಿ.ಬಿ.ದಳವಾಯಿ ಅವರನ್ನು ಹುನಗುಂದ ಠಾಣೆಗೆ, ಡಿ.ಜೆ.ಶಿವಪುರ ಅವರನ್ನು ಬಾಗಲಕೋಟೆ ಗ್ರಾಮೀಣ ಠಾಣೆಗೆ, ಪೇದೆಗಳಾದ ನಾಗರಾಜು ಅಂಕೋಲೆ ಅವರನ್ನು ಬೀಳಗಿ ಠಾಣೆಗೆ, ಜಿ.ಬಿ.ಅಂಗಡಿ ಅವರನ್ನು ಇಳಕಲ್ ಠಾಣೆಗೆ, ರಮೇಶ ಈಳಗೇರ ಅವರನ್ನು ಬಾಗಲಕೋಟೆ ಗ್ರಾಮೀಣ ಠಾಣೆಗೆ ಹಾಗೂ ರಮೇಶ್ ಹುಲ್ಲೂರು ಅವರನ್ನು ಬಾಗಲಕೋಟೆ ಜಿಲ್ಲಾ ಪೊಲೀಸ್ ಕಚೇರಿಗೆ ವರ್ಗಾವಣೆ ಮಾಡಲಾಗಿದೆ.


ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 9686399493ನಂಬರ್ ಸೇರಿಸಿ.

ಗ್ರೂಪ್ ಗೆ ಜಾಯಿನ್ ಆಗಿ:

https://chat.whatsapp.com/BR3b3qhWZWaCzpD1m6N5uu

ಇತ್ತೀಚಿನ ಸುದ್ದಿ