ಚುನಾವಣೆ ಬಂದಾಗಲೆಲ್ಲ ಯೋಧರ ಮೇಲೆ ದಾಳಿ: ಬಿಜೆಪಿ ಮೇಲೆ ರಾಜ್ಯ ಕಾಂಗ್ರೆಸ್ ಅನುಮಾನ
ಬೆಂಗಳೂರು: ಚುನಾವಣೆ ಬರುವ ಸಂದರ್ಭದಲ್ಲೆಲ್ಲ, ಯೋಧರ ಮೇಲೆ ದಾಳಿ ನಡೆಯುತ್ತಿದೆ. ದೊಡ್ಡ ಸಂಖ್ಯೆಯಲ್ಲಿ ಯೋಧರ ಸಾವು ಕೂಡ ಸಂಭವಿಸುತ್ತದೆ ಬಿಜೆಪಿಯು ಯೋಧರ ಸಾವನ್ನು ಚುನಾವಣೆಗೆ ಉಪಯೋಗಿಸಿಕೊಳ್ಳುತ್ತಿದೆ ಎಂದು ರಾಜ್ಯ ಕಾಂಗ್ರೆಸ್ ಅನುಮಾನ ವ್ಯಕ್ತಪಡಿಸಿದೆ.
ನಕ್ಸಲರ ದಾಳಿಯಿಂದ ಯೋಧರು ಹುತಾತ್ಮರಾಗಿರುವ ವಿಚಾರಕ್ಕೆ ಸಂಬಂಧಿಸಿದಂತೆ ಕಾಂಗ್ರೆಸ್ ಟ್ವೀಟ್ ಮಾಡಿದ್ದು, ಚುನಾವಣೆ ಬಂದಾಗಲೆಲ್ಲ ಯೋಧರ ಮೇಲೆ ದಾಳಿ ನಡೆಯುತ್ತದೆ. ಬಿಜೆಪಿ ಪ್ರಚಾರದ ಭಾಷಣದಲ್ಲಿ ಬಲಿದಾನ ವ್ಯರ್ಥವಾಗಲು ಬಿಡುವುದಿಲ್ಲ ಎನ್ನುವ ಕಾಮನ್ ಡೈಲಾಗ್ ಬರುತ್ತದೆ. ಯೋಧರ ಸಾವನ್ನು ಚುನಾವಣೆಗೆ ಬಿಜೆಪಿ ಉಪಯೋಗಿಸಿಕೊಳ್ಳುತ್ತದೆ ಎಂದು ಹೇಳಿದೆ.
ಪತ್ರಕರ್ತರ ಅರ್ನಾಬ್ ಗೋಸ್ವಾಮಿ ಪುಲ್ವಾಮ ದಾಳಿಯಲ್ಲಿ ಹುತಾತ್ಮರಾದ ಯೋಧರ ಸಾವನ್ನು ಸಂಭ್ರಮಿಸಿರುವ ವಿಚಾರವನ್ನು ಪ್ರಸ್ತಾಪಿಸಿರುವ ಕಾಂಗ್ರೆಸ್, “ಚುನಾವಣೆ ಬಂದಾಗಲೆಲ್ಲ ಯೋಧರ ಮೇಲೆ ದಾಳಿಯಾಗುತ್ತದೆ. ದೊಡ್ಡ ಸಂಖ್ಯೆಯಲ್ಲಿ ಯೋಧರ ಸಾವು ನೋವು ಸಂಭವಿಸುತ್ತದೆ. ಬಿಜೆಪಿ ಪ್ರಚಾರದ ಭಾಷಣದಲ್ಲಿ ಬಲಿದಾನ ವ್ಯರ್ಥವಾಗಲು ಬಿಡುವುದಿಲ್ಲ ಎನ್ನುವ ಕಾಮನ್ ಡೈಲಾಗ್ ಬರುತ್ತದೆ. ಯೋಧರ ಸಾವನ್ನು ಚುನಾವಣೆಗೆ ಬಿಜೆಪಿ ಉಪಯೋಗಿಸಿಕೊಳ್ಳುತ್ತದೆ. ಅರ್ನಾಬ್‌ನಂತಹವರು ಸಾವನ್ನು ಸಂಭ್ರಮಿಸುತ್ತಾರೆ” ಎಂದು ಟ್ವೀಟ್ ,ಮಾಡಿದೆ.
ಚುನಾವಣೆ ಬಂದಾಗಲೆಲ್ಲ ಯೋಧರ ಮೇಲೆ ದಾಳಿಯಾಗುತ್ತದೆ.
ದೊಡ್ಡ ಸಂಖ್ಯೆಯಲ್ಲಿ ಯೋಧರ ಸಾವು ನೋವು ಸಂಭವಿಸುತ್ತದೆ.
ಬಿಜೆಪಿ ಪ್ರಚಾರದ ಭಾಷಣದಲ್ಲಿ ಬಲಿದಾನ ವ್ಯರ್ಥವಾಗಲು ಬಿಡುವುದಿಲ್ಲ ಎನ್ನುವ ಕಾಮನ್ ಡೈಲಾಗ್ ಬರುತ್ತದೆ.
ಯೋಧರ ಸಾವನ್ನು ಚುನಾವಣೆಗೆ ಬಿಜೆಪಿ ಉಪಯೋಗಿಸಿಕೊಳ್ಳುತ್ತದೆ.
ಅರ್ನಾಬ್‌ನಂತಹವರು ಸಾವನ್ನು ಸಂಭ್ರಮಿಸುತ್ತಾರೆ
1/2— Karnataka Congress (@INCKarnataka) April 5, 2021