ಮದೀನಾದ ಮಸ್ಜಿದುನ್ನಬವಿಯಲ್ಲಿ ಇಫ್ತಾರ್ ಗಾಗಿ ಪ್ರತಿದಿನ 15 ಲಕ್ಷ ಖರ್ಜೂರ ವಿತರಣೆ

ಮದೀನಾದ ಮಸ್ಜಿದುನ್ನಬವಿಯಲ್ಲಿ ಇಫ್ತಾರ್ ಗಾಗಿ ಪ್ರತಿದಿನ 15 ಲಕ್ಷ ಖರ್ಜೂರವನ್ನು ವಿತರಣೆ ಮಾಡಲಾಗುತ್ತಿದೆ. ಮಕ್ಕಾದ ಮಸ್ಜಿದ್ ಹರಾಮ್ ನಲ್ಲಿ ಜಗತ್ತಿನಲ್ಲಿಯೇ ಅತಿ ದೊಡ್ಡದಾದ ಇಫ್ತಾರ್ ನಡೆಯುತ್ತಿದ್ದರೆ ಎರಡನೆಯದಾಗಿ ಮದೀನಾದ ಮಸ್ಜಿದುನ್ನಬವಿ ಗುರುತಿಸಿಕೊಂಡಿದೆ.
ಇಫ್ತಾರ್ ಗೆ ನೀಡಲಾಗುವ ಒಂದು ಕಿಟ್ ನಲ್ಲಿ ಏಳು ಖರ್ಜೂರಗಳು ಇರುತ್ತವೆ. ಬೇರೆ ಬೇರೆ ವಿಧದ ಖರ್ಜೂರಗಳು ಇವುಗಳಾಗಿವೆ. ಮದೀನಾದ ಖರ್ಜೂರದ ತೋಟದಲ್ಲಿ ಬೆಳೆಯಲಾಗುವ ವಿವಿಧ ಬಗೆಯ ಖರ್ಜೂರಗಳು ಇವುಗಳಲ್ಲಿ ಇರುತ್ತವೆ ಎಂದು ವರದಿ ತಿಳಿಸಿದೆ.
ಮದೀನ ಪರಿಸರದ ಖರ್ಜೂರ ತೋಟಗಳಿಗೆ ಬಹಳ ದೊಡ್ಡ ಇತಿಹಾಸ ಇದೆ. ಮದೀನಾದಲ್ಲಿ 29,000 ಖರ್ಜೂರದ ಫಾಮುಗಳಿಂದ ಮೂರು ಲಕ್ಷದ 40 ಸಾವಿರಕ್ಕಿಂತಲೂ ಅಧಿಕ ಟನ್ ಖರ್ಜೂರವನ್ನು ಉತ್ಪಾದಿಸಲಾಗುತ್ತದೆ. ಸೌದಿ ಅರೇಬಿಯಾದಲ್ಲಿ ಒಟ್ಟು ಉತ್ಪತ್ತಿಯಾಗುವ ಖರ್ಜೂರಗಳ ಪೈಕಿ 18 ಶೇಕಡ ಖರ್ಜೂರವನ್ನು ಮದೀನದಲ್ಲೇ ಉತ್ಪಾದಿಸಲಾಗುತ್ತದೆ.
ಈ ಖರ್ಜೂರಗಳನ್ನು ಪ್ಯಾಕ್ ಮಾಡಲು ಮತ್ತು ಸಂಸ್ಕರಿಸಲು 44 ಫ್ಯಾಕ್ಟರಿಗಳು ಮದೀನಾದಲ್ಲಿ ಇವೆ ಎಂದು ತಿಳಿದು ಬಂದಿದೆ.
ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 9686399493 ನಂಬರ್ ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ:
https://chat.whatsapp.com/BHOOdLNNvmD17cBJslQgwj