ಉಮ್ರಾ ನಿರ್ವಹಿಸುವ ಮಹಿಳೆಯರ ಕೂದಲು ಕತ್ತರಿಸುವುದಕ್ಕೂ ಮಸ್ಜಿದುಲ್ ಹರಾಮ್ ನಲ್ಲಿ ವ್ಯವಸ್ಥೆ

15/03/2025
ಉಮ್ರಾ ನಿರ್ವಹಿಸುವ ಮಹಿಳೆಯರ ಕೂದಲು ಕತ್ತರಿಸುವುದಕ್ಕೂ ಮಸ್ಜಿದುಲ್ ಹರಾಮ್ ನಲ್ಲಿ ವ್ಯವಸ್ಥೆ ಮಾಡಲಾಗಿದೆ. ಇದಕ್ಕಾಗಿ ಮಹಿಳೆಯರದೇ ತಂಡವನ್ನು ನಿಯೋಜಿಸಲಾಗಿದ್ದು ಹರಮ್ ನ ಪರಿಸರದಲ್ಲಿ ಮೊಬೈಲ್ ಬಾರ್ಬರ್ ಶಾಪ್ ವಾಹನಗಳನ್ನು ನಿಲ್ಲಿಸಲಾಗಿದೆ ಎಂದು ವರದಿಯಾಗಿದೆ.
ಈ ಮೊದಲು ಈ ಸೌಲಭ್ಯವನ್ನು ಪುರುಷರಿಗೆ ಮಾತ್ರ ನೀಡಲಾಗಿತ್ತು. ಇದೀಗ ಮಹಿಳೆಯರಿಗೂ ಈ ಸೌಲಭ್ಯವನ್ನು ವಿಸ್ತರಿಸಲಾಗಿದೆ. ಮಾತ್ರ ಅಲ್ಲ ಮಹಿಳೆಯರ ಖಾಸಗಿತನವನ್ನು ರಕ್ಷಿಸುವ ರೀತಿಯಲ್ಲಿ ಈ ಮೊಬೈಲ್ ಬಾರ್ಬರ್ ಶಾಪ್ ಅನ್ನು ರಚಿಸಲಾಗಿದೆ ಎಂದು ಸೌದಿ ಆಡಳಿತ ತಿಳಿಸಿದೆ
ಈ ಕೊನೆಗೊಳ್ಳುವ ಮರ್ವಾದ ಭಾಗದಲ್ಲಿ ಈ ವ್ಯವಸ್ಥೆಯನ್ನು ಮಾಡಲಾಗಿದೆ.
ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 9686399493 ನಂಬರ್ ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ:
https://chat.whatsapp.com/BHOOdLNNvmD17cBJslQgwj