ಜಸ್ಟ್ 8th ಪಾಸಾದವರಿಗೆ ಭಾರತೀಯ ಸೇನೆಯಲ್ಲಿ ಅಗ್ನಿವೀರರಾಗಿ ಉದ್ಯೋಗ ಪಡೆಯುವ ಅವಕಾಶ: ಬೇಗ ಅರ್ಜಿ ಸಲ್ಲಿಸಿ

Agni Veer Vacancy for the year 2025 : ಭಾರತೀಯ ರಕ್ಷಣಾ ಪಡೆಯಲ್ಲಿ ಇತ್ತೀಚಿಗೆ ಜಾರಿಯಾಗಿರುವಂತಹ ಅಗ್ನಿಪಥ ಯೋಜನೆಯ ಅಡಿಯಲ್ಲಿ ಸದ್ಯಕ್ಕೆ ಭಾರತೀಯ ಸೇನೆಯಲ್ಲಿ ಅಗ್ನಿವೀರ ಹುದ್ದೆಗಳನ್ನು ನೇಮಕಾತಿ ಮಾಡಿಕೊಳ್ಳಲು ಅಧಿಸೂಚನೆ ಹೊರಡಿಸಿದೆ.
ಕೇವಲ 8ನೇ ತರಗತಿ ಪಾಸಾದ ಅಭ್ಯರ್ಥಿಗಳಿಂದ ಹಿಡಿದು ದ್ವಿತೀಯ ಪಿಯುಸಿ ಪಾಸಾದವರಿಗೂ ಕೂಡ ಈ ಒಂದು ಉದ್ಯೋಗವನ್ನು ಪಡೆದುಕೊಳ್ಳುವ ಅವಕಾಶವಿದೆ. ಈ ನೇಮಕಾತಿಗಾಗಿ ಅರ್ಜಿ ಸಲ್ಲಿಸಲು ಮಾರ್ಚ್ 12 ರಿಂದ ಆರಂಭವಾಗಿದ್ದು ಏಪ್ರಿಲ್ 10ನೇ ತಾರೀಕಿಗೆ ಕೊನೆಗೊಳ್ಳಲಿದೆ. ಇದರ ಒಳಗಾಗಿ ಉದ್ಯೋಗ ಬಯಸುವ ಅಭ್ಯರ್ಥಿಗಳು ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಿ.
ಯಾವ ಯಾವ ಹುದ್ದೆಗಳಿಗೆ ಈ ನೇಮಕಾತಿ ನಡೆಯುತ್ತಿದೆ?
ಭಾರತ ದೇಶಾದ್ಯಂತ ಇರುವ ವಿವಿಧ ಸೇನಾ ವಲಯಗಳ ನೇಮಕಾತಿ ಕಚೇರಿಗಳಲ್ಲಿ ಜೂನ್ ತಿಂಗಳಿನಲ್ಲಿ ನೇಮಕಾತಿ ಪ್ರಕ್ರಿಯೆಗಳು ಆರಂಭವಾಗಲಿದ್ದು ಈ ಕೆಳಗಿನ ಹುದ್ದೆಗಳನ್ನು ನೇಮಕಾತಿ ಮಾಡಿಕೊಳ್ಳಲಾಗುವುದು.
* ಜನರಲ್ ಡ್ಯೂಟಿ ಹುದ್ದೆಗಳು
* ಟೆಕ್ನಿಕಲ್ ಹುದ್ದೆಗಳು
* ಕ್ಲರ್ಕ್ ಕಮ್ ಸ್ಟೋರ್ ಕೀಪರ್ ಹುದ್ದೆಗಳು
* ಟ್ರೇಡ್ಸ್ ಮನ್ ಹುದ್ದೆಗಳು
ಕರ್ನಾಟಕ ರಾಜ್ಯದಲ್ಲಿ ಯಾವ ಯಾವ ಜಿಲ್ಲೆಗಳಲ್ಲಿ ಈ ನೇಮಕಾತಿ ನಡೆಯಲಿದೆ?
ಕರ್ನಾಟಕ ರಾಜ್ಯದ ಬೆಂಗಳೂರು ಮಂಗಳೂರು ಮತ್ತು ಬೆಳಗಾವಿ ಸೇನಾ ವಲಯ ಕಚೇರಿಗಳಲ್ಲಿ ಈ ನೇಮಕಾತಿ ಪ್ರಕ್ರಿಯೆಯ ರ್ಯಾಲಿ ನಡೆಯಲಿದೆ. ಆದರೆ ಮಹಿಳೆಯರಿಗಾಗಿಯೇ ಪ್ರತ್ಯೇಕವಾಗಿ ರ್ಯಾಲಿ ನಡೆಯಲಿದೆ.
ನೇಮಕಾತಿ ಪ್ರಕ್ರಿಯೆ ಹೇಗಿದೆ?
ಅಗ್ನಿಪತ್ ಯೋಜನೆಯ ಅಗ್ನಿ ವೀರ ಹುದ್ದೆಗಳನ್ನು ನೇಮಕಾತಿ ಮಾಡಿಕೊಳ್ಳಲು ಅರ್ಜಿ ಸಲ್ಲಿಸಿದ ಅಭ್ಯರ್ಥಿಗಳಿಗೆ ಮೊದಲನೆಯ ಹಂತದಲ್ಲಿ ಆನ್ಲೈನ್ ಕಂಪ್ಯೂಟರ್ ಬೆಸ್ಡ್ ಪ್ರವೇಶಾತಿ ಪರೀಕ್ಷೆಯನ್ನು ನಡೆಸಿ ನಂತರದಲ್ಲಿ ಫಿಸಿಕಲ್ ಟೆಸ್ಟ್ ನಡೆಸಿ ನಂತರದಲ್ಲಿ ಮೆಡಿಕಲ್ ಟೆಸ್ಟ್ ಹಾಗೂ ದಾಖಲಾತಿ ಪರಿಶೀಲನೆ ಸೇರಿದಂತೆ ವಿವಿಧ ಟೆಸ್ಟ್ ಗಳ ಮುಖಾಂತರ ಅಂತಿಮವಾಗಿ ಆಯ್ಕೆ ಮಾಡಿಕೊಳ್ಳಲಾಗುವುದು.
ಹಾಗಿದ್ದರೆ ಈ ಹುದ್ದೆಗಳಿಗೆ ಯಾರು ಅರ್ಜಿ ಸಲ್ಲಿಸಲು ಅರ್ಹತೆ ಹೊಂದಿರುತ್ತಾರೆ?
ವಿವಿಧ ವಿಭಾಗದ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ವಿವಿಧ ಅರ್ಹತೆಗಳನ್ನು ನಿಗದಿಪಡಿಸಲಾಗಿದ್ದು ಈ ಕೆಳಗಿನಂತಿರುತ್ತದೆ.
* ಒಂದು ವೇಳೆ ನೀವು ಟೆಕ್ನಿಕಲ್ ವಿಭಾಗದ ಹುದ್ದೆಗಳಿಗೆ ಅರ್ಜಿ ಸಲ್ಲಿಸುವುದಾದರೆ ಕಡ್ಡಾಯವಾಗಿ ವಿಜ್ಞಾನ ವಿಷಯದಲ್ಲಿ ದ್ವಿತೀಯ ಪಿಯುಸಿ ಪಾಸ್ ಆಗಿರಬೇಕು.
* ಅದೇ ಜನರಲ್ ಡ್ಯೂಟಿ ವಿಭಾಗದ ಹುದ್ದೆಗಳಿಗೆ ಅರ್ಜಿ ಸಲ್ಲಿಸುವುದಾದರೆ 10ನೇ ತರಗತಿಯಲ್ಲಿ ಕನಿಷ್ಠ 45% ಅಂಕಗಳೊಂದಿಗೆ ಪಾಸಾಗಿರಬೇಕು.
* ವಿವಿಧ ಟ್ರೇಡ್ಸ್ ವಿಭಾಗದ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು 8ನೇ ತರಗತಿ ಪಾಸಾಗಿರಬೇಕು.
ವಯೋಮಿತಿ: ಅಭ್ಯರ್ಥಿಗಳು 17.5 ವರ್ಷದಿಂದ 21 ವರ್ಷದ ಒಳಗಿನ ಅಭ್ಯರ್ಥಿಗಳಾಗಿರಬೇಕು.
ಅರ್ಜಿ ಶುಲ್ಕ : ಎಲ್ಲಾ ವರ್ಗದ ಅಭ್ಯರ್ಥಿಗಳು 250 ಅರ್ಜಿ ಶುಲ್ಕ ಪಾವತಿಬೇಕು.
ಅರ್ಜಿ ಹಾಗೂ ಅಧಿಸೂಚನೆಗಾಗಿ ಜಾಲತಾಣ — https://joinindianarmy.nic.in
ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 9686399493ನಂಬರ್ ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: