ಚರ್ಚ್ ಗೆ ನುಗ್ಗಿ 4.98 ಲಕ್ಷ ರೂ. ಕದ್ದ ದುಷ್ಕರ್ಮಿಗಳು
06/04/2021
ಮಂಗಳೂರು: ನಗರದ ಚರ್ಚ್ ವೊಂದರ ಕಚೇರಿಯಿಂದ 4.98 ಲಕ್ಷ ರೂ. ಕದ್ದು ಪರಾರಿಯಾಗಿರುವ ಘಟನೆ ನಡೆದಿದ್ದು, ಏಪ್ರಿಲ್ 5ರಂದು ಮುಂಜಾನೆ ಈ ಘಟನೆ ನಡೆದಿದೆ ಎಂದು ವರದಿಯಾಗಿದೆ.
ಮಂಗಳೂರಿನ ಬೆಂದೂರ್ ನಲ್ಲಿರುವ ಸಂತ ಸೆಬಾಸ್ಟಿಯನ್ ಚರ್ಚ್ ನಲ್ಲಿ ಈ ಘಟನೆ ನಡೆದಿದೆ. ಬೆಳಿಗ್ಗೆ ಪಾದ್ರಿ ಅವರು ಚರ್ಚ್ ನಲ್ಲಿ ಸಾಮೂಹಿಕ ಪ್ರಾರ್ಥನೆ ಇರುವ ಕಾರಣ ಆತುರಾತುರವಾಗಿ ಚರ್ಚ್ ನಿಂದ ಹೊರಟು ಹೋಗಿದ್ದರು. ಈ ವೇಳೆ ಚರ್ಚ್ ನ ಕಚೇರಿ ಬಾಗಿಲು ಹಾಕಲು ಮರೆತು ಹೋಗಿದ್ದರು ಎಂದು ತಿಳಿದು ಬಂದಿದೆ.
ಇದೇ ಸಂದರ್ಭದಲ್ಲಿ ಕಚೇರಿಗೆ ನುಗ್ಗಿದ ಅಪರಿಚಿತ ವ್ಯಕ್ತಿ ಕಚೇರಿಗೆ ನುಗ್ಗಿ 4.98 ಲಕ್ಷ ರೂಪಾಯಿ ಕದ್ದು ಪರಾರಿಯಾಗಿದ್ದಾನೆ ಎಂದು ತಿಳಿದು ಬಂದಿದೆ. ಘಟನೆಯ ಮಾಹಿತಿ ಪಡೆದ ಕದ್ರಿ ಪೊಲೀಸರು ಘಟನಾ ಸ್ಥಳಕ್ಕೆ ಬಂಧು ಪರಿಶೀಲನೆ ನಡೆಸಿದ್ದಾರೆ. ಮಂಗಳೂರು ಪೂರ್ವ ಪೊಲೀಸ್ ಠಾಣೆಯಲ್ಲಿ ಈ ಬಗ್ಗೆ ಪ್ರಕರಣ ದಾಖಲಾಗಿದೆ.