ಮಸ್ಜಿದುಲ್ ಹರಾಮ್ ಮತ್ತು ಮಸ್ಜಿದುನ್ನಬವಿಯಲ್ಲಿ ಮಕ್ಕಳಿಗೆ ಮತ್ತು ವೃದ್ಧರಿಗೆ ಸುರಕ್ಷತೆಯ ದೃಷ್ಟಿಯಿಂದ ಬ್ರೇಸ್ಲೆಟ್ ಹಂಚಿಕೆ

ಮಸ್ಜಿದುಲ್ ಹರಾಮ್ ಮತ್ತು ಮಸ್ಜಿದುನ್ನಬವಿಯಲ್ಲಿ ಮಕ್ಕಳಿಗೆ ಮತ್ತು ವೃದ್ಧರಿಗೆ ಸುರಕ್ಷತೆಯ ದೃಷ್ಟಿಯಿಂದ ಬ್ರೇಸ್ಲೆಟನ್ನು ನೀಡಲಾಗುವುದು. ಕಾಣೆಯಾದವರನ್ನು ಸುಲಭದಲ್ಲಿ ಪತ್ತೆಹಚ್ಚಲು ಈ ಬ್ರೇಸ್ಲೆಟ್ ನಿಂದ ಸಾಧ್ಯವಾಗಲಿದೆ.
ಈ ಸುರಕ್ಷಿತ ಬ್ರೇಸ್ಲೆಟ್ ಸೇವೆಗಾಗಿ ಮಕ್ಕಾದ ಮಸ್ಜಿದುಲ್ ಹರಾಮ್ ನ ಒಂದನೇ ಬಾಗಿಲಾಗಿರುವ ಮಾಲಿಕ್ ಅಬ್ದುಲ್ ಅಜೀಜ್ ಮತ್ತು 79ನೇ ಬಾಗಿಲು ಆಗಿರುವ ಮಾಲಿಕ್ ಫಹದ್ ಜೊತೆ ಸೇರಿ ಮೆಷಿನ್ಗಳನ್ನು ಸ್ಥಾಪಿಸಲಾಗಿದೆ.
ಇದರ ಮೂಲಕ ಬಾರ್ಕೋಡ್ ಸಹಿತ ಬ್ರೇಸ್ಲೆಟ್ ಪ್ರಿಂಟ್ ಮಾಡಬಹುದಾಗಿದೆ ಇದನ್ನು ಕೈಗೆ ಅಳವಡಿಸಿಕೊಂಡು ಮಕ್ಕಳು ಮಸೀದಿ ಪ್ರವೇಶಿಸಬೇಕು.
ಮೊಬೈಲ್ ನಂಬರ್ ಸಹಿತ ಪೂರ್ಣ ಮಾಹಿತಿ ಈ ಬ್ರೇಸ್ಲೆಟ್ ನಲ್ಲಿ ಇರಲಿದೆ. ನಿಮ್ಮ ಮಕ್ಕಳು ನಮ್ಮೊಂದಿಗೆ ಸುರಕ್ಷಿತರಾಗಿದ್ದಾರೆ ಎಂಬ ಕಾರ್ಯಕ್ರಮದ ಭಾಗವಾಗಿ ನರ್ಸರಿ ಸಹಿತ ಹಲವು ಸೇವೆಗಳನ್ನು ಮಕ್ಕಳಿಗೆ ನೀಡುವ ಪ್ರಯತ್ನ ನಡೆಸಲಾಗುತ್ತಿದೆ.
ಹಿರಿಯರಿಗೆ ನಮಾಜಿಗಾಗಿ ಪ್ರತ್ಯೇಕ ವ್ಯವಸ್ಥೆಯನ್ನು ಮಾಡಲಾಗಿದೆ. 7,000 ಕ್ಕಿಂತಲೂ ಅಧಿಕ ಸ್ವಯಂಸೇವಕರು ಹರಮ್ ನ ಒಳಗೂ ಹೊರಗೂ ಸಿದ್ಧವಾಗಿದ್ದಾರೆ.
ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 9686399493 ನಂಬರ್ ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ:
https://chat.whatsapp.com/BHOOdLNNvmD17cBJslQgwj