ಬ್ರಿಟನ್ನಿನ ಆಫ್ ಸ್ಟಡ್ ನ ಹಂಗಾಮಿ ಚೇರ್ಮನ್ ಆಗಿ ಶಿಕ್ಷಣ ತಜ್ಞ ಮತ್ತು ಧಾರ್ಮಿಕ ವಿದ್ವಾಂಸ ಮುಫ್ತಿ ಹಮೀದ್ ಪಟೇಲ್ ಆಯ್ಕೆ

ಬ್ರಿಟನ್ನಿನ ಅಫ್ ಸ್ಟಡ್ ನ ಹಂಗಾಮಿ ಚೇರ್ಮನ್ ಆಗಿ ಶಿಕ್ಷಣ ತಜ್ಞ ಮತ್ತು ಧಾರ್ಮಿಕ ವಿದ್ವಾಂಸರಾದ ದ ಮುಫ್ತಿ ಹಮೀದ್ ಪಟೇಲ್ ಆಯ್ಕೆಯಾಗಿದ್ದಾರೆ.
ಇದೇ ಮೊದಲ ಬಾರಿ ಓರ್ವ ಧಾರ್ಮಿಕ ವಿದ್ವಾಂಸ ಬ್ರಿಟನಿನ ಶೈಕ್ಷಣಿಕ ಕ್ಷೇತ್ರವನ್ನು ನಿಯಂತ್ರಿಸುವ ಮತ್ತು ನಿರ್ವಹಿಸುವ ಆಫಸ್ಟೆಡ್ ನ ಚೇರ್ಮನ್ ಪದವಿಗೆ ಏರಿದ್ದಾರೆ. ತಾತ್ಕಾಲಿಕವಾಗಿ ಅವರನ್ನು ಈ ಆಯ್ಕೆ ಮಾಡಲಾಗಿದೆ.
ಈಗಿನ ಅಧ್ಯಕ್ಷರು ಹುದ್ದೆಯನ್ನು ತೊರೆದ ಕಾರಣ ಇವರು ಈ ಹುದ್ದೆಗೆ ಆಯ್ಕೆಯಾಗಿದ್ದಾರೆ. ಐದು ತಿಂಗಳವರೆಗೆ ಇವರ ಹಂಗಾಮಿ ಅಧ್ಯಕ್ಷರಾಗಿರಲಿದ್ದಾರೆ. ಹಲವು ಇಸ್ಲಾಮಿ ಶಾಲೆಗಳು ಸೇರಿದಂತೆ ಸುಮಾರು 40 ಪ್ರೈಮರಿ ಸೆಕೆಂಡರಿ ಶಿಕ್ಷಣ ಸಂಸ್ಥೆಗಳನ್ನು ನಡೆಸುತ್ತಿರುವ ಸ್ಟಾರ್ ಅಕಾಡೆಮಿಸ್ ಟ್ರಸ್ಟ್ ನ ಚೀಫ್ ಎಕ್ಸಿಕ್ಯೂಟಿವ್ ಕೂಡ ಇವರಾಗಿದ್ದಾರೆ. ಈ ಟ್ರಸ್ಟ್ ನ ಅಧೀನದಲ್ಲಿ ಒಂದು ಕ್ರೈಸ್ತ ಶಾಲೆ ಮತ್ತು ಗ್ರಾಮರ್ ಶಾಲೆಯನ್ನು ಕೂಡ ನಡೆಸಲಾಗುತ್ತಿದೆ. ಇವರ ಶಾಲೆಗಳಿಗೆ ಸಾಮಾಜಿಕವಾಗಿ ಬಾರಿ ಗೌರವವೂ ಇದೆ. ಪಶ್ಚಿಮ ಇಂಗ್ಲೆಂಡ್ ಪೂರ್ವ ಮಿಡ್ಲಾಂಡ್ಸ್ ಲಂಡನ್ ಮುಂತಾದ ಕಡೆ ಇವರ ಶಾಲೆಗಳು ಕಾರ್ಯಾಚರಿಸುತ್ತಿವೆ.
ಬಡ ಕುಟುಂಬಗಳ ವಿದ್ಯಾರ್ಥಿಗಳನ್ನು ಸಾಕುವುದು ಮತ್ತು ಅವರಿಗೆ ಉಚಿತವಾಗಿ ಶಿಕ್ಷಣ ಕೊಡುವ ಕೆಲಸವನ್ನು ಕೂಡ ಇವರ ಟ್ರಸ್ಟ್ ನಿರ್ವಹಿಸುತ್ತಿದೆ.
ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 9686399493 ನಂಬರ್ ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ:
https://chat.whatsapp.com/BHOOdLNNvmD17cBJslQgwj