ಹನಿಟ್ರ್ಯಾಪ್: ಸಿಎಂ ಸಿದ್ದರಾಮಯ್ಯನವರ ಆಪ್ತ ಸಚಿವರಿಗೆ ಹನಿಟ್ರ್ಯಾಪ್ ಗೆ ಯತ್ನ!

ತುಮಕೂರು: ಸಿಎಂ ಸಿದ್ದರಾಮಯ್ಯನವರ ಆಪ್ತ ವಲಯದಲ್ಲಿ ಗುರುತಿಸಿಕೊಂಡಿರುವ ಸಚಿವರೊಬ್ಬರಿಗೆ ಹನಿಟ್ರ್ಯಾಪ್ ಗೆ ಯತ್ನಿಸಿರುವ ಆರೋಪ ಕೇಳಿ ಬಂದಿದ್ದು, ಸ್ವಲ್ಪದರಲ್ಲೇ ಸಚಿವರು ಹನಿಟ್ರ್ಯಾಪ್ ನಿಂದ ತಪ್ಪಿಸಿಕೊಂಡಿದ್ದಾರೆ ಎಂದು ವರದಿಯಾಗಿದೆ.
ತುಮಕೂರು ಭಾಗದ ಸಚಿವರೊಬ್ಬರಿಗೆ ಹನಿಟ್ರ್ಯಾಪ್ ನಡೆಸಲು ಪ್ರಯತ್ನ ನಡೆದಿದೆ ಎನ್ನಲಾಗುತ್ತಿದೆ. ಒಂದು ತಂಡ ಹನಿಟ್ರ್ಯಾಪ್ ನಡೆಸಲು ಸಚಿವರ ಹಿಂದೆ ಸತತ ಪ್ರಯತ್ನ ನಡೆಸಿತ್ತು ಎನ್ನಲಾಗಿದೆ.
ಹನಿಟ್ರ್ಯಾಪ್ ಗೆ ಬಂದಿದ್ದ ಟೀಮ್ ಗೆ ಸಚಿವರು ಶಾಕ್ ನೀಡಿದ್ದಾರೆ. ಹನಿಟ್ರ್ಯಾಪ್ ಗೆ ಬಂದಿದ್ದ ತಂಡದ ಬಣ್ಣ ಬಯಲು ಮಾಡಿದ್ದಾರಂತೆ ಆ ಸಚಿವರು. ಬಳಿಕ ವಾರ್ನಿಂಗ್ ಕೊಟ್ಟು ಕಳುಹಿಸಿದ್ದಾರೆ. ಹನಿಟ್ರ್ಯಾಪ್ ಹಿಂದೆ ಇನ್ನೊಬ್ಬ ಪ್ರಭಾವಿ ನಾಯಕನ ಕೈವಾಡದ ಆರೋಪ ಕೇಳಿ ಬಂದಿದೆ. ಈ ಬಗ್ಗೆ ವರಿಷ್ಠರಿಗೆ ದೂರು ನೀಡಲಾಗಿದೆ ಎನ್ನಲಾಗುತ್ತಿದೆ.
ಈ ಘಟನೆಯ ಬಗ್ಗೆ ಸಿಎಂ ಸಿದ್ದರಾಮಯ್ಯ ಗಮನಕ್ಕೂ ತುಮಕೂರು ಭಾಗದ ಆ ಸಚಿವರು ತಂದಿದ್ದಾರೆ ಎನ್ನಲಾಗಿದೆ. ಈ ಘಟನೆ ಕಾಂಗ್ರೆಸ್ ವಲಯದಲ್ಲಿ ಭಾರೀ ಚರ್ಚೆಗೆ ಕಾರಣವಾಗಿದೆ.
ಕಳೆದ 2 ತಿಂಗಳುಗಳಿಂದ ನಿರಂತರವಾಗಿ ಸಚಿವರ ಮೇಲೆ ಹನಿಟ್ರ್ಯಾಪ್ ಗೆ ಪ್ರಯತ್ನಗಳು ನಡೆದಿತ್ತು, ಆದರೆ ಇದರ ಬಗ್ಗೆ ಸಚಿವರಿಗೆ ಅನುಮಾನಗಳು ವ್ಯಕ್ತವಾಗಿವೆ. ಆಗಾಗ ಭೇಟಿಯಾಗುವುದು, ದೂರವಾಣಿ ಕರೆಗಳನ್ನು ಮಾಡುತ್ತಿರುವುದು ಅನುಮಾನಕ್ಕೆ ಕಾರಣವಾಯ್ತು. ರಾಜರಂತೆ ಅಬ್ಬರಿಸಿ ಬೊಬ್ಬಿರಿಯುತ್ತಿದ್ದ ಪ್ರಭಾವಿ ಕಾಂಗ್ರೆಸ್ ಸಚಿವರ ಚಾರಿತ್ರ್ಯಹರಣಕ್ಕೆ ಪ್ರಯತ್ನ ನಡೆಸಲಾಗಿತ್ತು ಎನ್ನಲಾಗುತ್ತಿದೆ.
ತಮ್ಮ ಪಕ್ಷದೊಳಗಿರುವ ಪ್ರಭಾವಿ ನಾಯಕರಿಂದಲೇ ಈ ಹನಿಟ್ರ್ಯಾಪ್ ಗೆ ಪ್ರಯತ್ನಗಳು ನಡೆದಿವೆ ಎನ್ನುವ ಗಂಭೀರ ಆರೋಪಗಳು ಇದೀಗ ಕೇಳಿ ಬಂದಿವೆ. ಈ ಘಟನೆಯ ಸತ್ಯಾಸತ್ಯತೆಗಳು ಇನ್ನಷ್ಟೇ ತಿಳಿದು ಬರಬೇಕಿದೆ.
ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 9686399493ನಂಬರ್ ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: