ಸೆಲ್ಫಿ ತೆಗೆಯಲು ಬಂದ ಅಭಿಮಾನಿಯ ಕೈಯಿಂದ ಮೊಬೈಲ್ ಕಿತ್ತುಕೊಂಡ ನಟ ಅಜಿತ್! - Mahanayaka
7:40 AM Thursday 12 - December 2024

ಸೆಲ್ಫಿ ತೆಗೆಯಲು ಬಂದ ಅಭಿಮಾನಿಯ ಕೈಯಿಂದ ಮೊಬೈಲ್ ಕಿತ್ತುಕೊಂಡ ನಟ ಅಜಿತ್!

ajith
06/04/2021

ನವದೆಹಲಿ: ತಮಿಳು ಸೂಪರ್ ಸ್ಟಾರ್ ಅಜಿತ್, ಇಂದು ಮತದಾನ ಮಾಡಿದ ಬಳಿಕ ಸಾಮಾಜಿಕ ಜಾಲತಾಣಗಳಲ್ಲಿ ಟ್ರೆಂಡ್ ಆಗಿದ್ದಾರೆ. ಇದಕ್ಕೆ ಕಾರಣ ಅವರು ಮತದಾನ ಮಾಡಿರುವುದು ಅಲ್ಲ, ತನ್ನ ಜೊತೆಗೆ ಸೆಲ್ಫಿ ತೆಗೆಯಲು ಬಂದ ಅಭಿಮಾನಿಯ ಫೋನ್ ನ್ನು ಕಿತ್ತುಕೊಂಡ ಕಾರಣಕ್ಕಾಗಿ ಅವರು  ಸುದ್ದಿಯಾಗಿದ್ದಾರೆ.

49 ವರ್ಷ ವಯಸ್ಸಿನ ಅಜಿತ್ ತಮ್ಮ ಪತ್ನಿ ಶಾಲಿನಿ ಹೊತೆಗೆ ಚೆನ್ನೈನ ತಿರುವಣ್ಣಮಿಯೂರ್ ನ ಮತದಾನ ಕೇಂದ್ರಕ್ಕೆ ಇಂದು ಬೆಳಗ್ಗೆ ಆಗಮಿಸಿದ್ದಾರೆ. ವೈರಲ್ ಆಗಿರುವ ವಿಡಿಯೋದಲ್ಲಿ ನಟ ಅಜಿತ್ ಒಪ್ಪಿಗೆಯಿಲ್ಲದೇ ಅಭಿಮಾನಿಯೋರ್ವ ಫೋಟೋ ತೆಗೆಯಲು ಅವರ ಸಮೀಪಕ್ಕೆ ತೆರಳಿದ್ದಾನೆ. ಈ ವೇಳೆ ಏಕಾಏಕಿ ಆಕ್ರೋಶಗೊಂಡ ಅಜಿತ್, ಅಭಿಮಾನಿಯ ಕೈಯೊಂದ ಮೊಬೈಲ್ ಕಿತ್ತುಕೊಂಡು ತನ್ನ ಜೇಬಿಗೆ ಹಾಕಿಕೊಂಡಿದ್ದಾರೆ.

ಫೋನ್ ಕಿತ್ತುಕೊಂಡು ಜೇಬಿಗಿಳಿಸಿದ ನಟ ಬಳಿಕ ಅಭಿಮಾನಿಗೆ ಕ್ಲಾಸ್ ತೆಗೆಯಲು ಆರಂಭಿಸಿದ್ದಾರೆ. ನೀನು ಮಾಸ್ಕ್ ಧರಿಸಿಕೊಂಡು ಬಾ ಎಂದು ಬುದ್ಧಿವಾದ ಹೇಳಿದ ಅಜಿತ್, ಬಳಿಕ ಫೋನ್ ಹಿಂದಿರುಗಿಸಿದ್ದಾರೆ ಎಂದು ತಿಳಿದು ಬಂದಿದೆ.

ಇನ್ನೂ ಈ ಘಟನೆಯ ಬಗ್ಗೆ ನಟ ವಿಜಯ್ ಅಭಿಮಾನಿಗಳು ಆಕ್ಷೇಪ ವ್ಯಕ್ತಪಡಿಸಿದ್ದು, ಫೋಟೋ ತೆಗೆಯಲು ಬಂದ ಅಭಿಮಾನಿಗೆ ನಯವಾಗಿ ಬುದ್ಧಿ ಹೇಳಿ ಕಳುಹಿಸಬಹುದಿತ್ತು. ಇಷ್ಟೊಂದು ಕೋಪದಿಂದ ಅಭಿಮಾನಿಗಳ ಜೊತೆಗೆ ನಡೆದುಕೊಳ್ಳಬಾರದಿತ್ತು. ಅಭಿಮಾನಿಗಳನ್ನು ಪ್ರೀತಿಸುವ ನಟ ವಿಜಯ್ ಅವರನ್ನು ನೋಡಿ ಕಲಿಯಿರಿ ಎಂದು ಹೇಳಿದ್ದಾರೆ.

https://twitter.com/TFC_mass/status/1379287841172115457?s=20

ಇತ್ತೀಚಿನ ಸುದ್ದಿ