ಕೊರೊನಾ ಹೆಚ್ಚಾಗಲು ವಲಸೆ ಕಾರ್ಮಿಕರೇ ಕಾರಣ ಎಂದ ಪಾಪಿ!
ಮುಂಬೈ: ರಾಜ್ಯದಲ್ಲಿ ಕೊರೊನಾ ವೈರಸ್ ಸೋಂಕು ವ್ಯಾಪಿಸಲು ಇತರ ರಾಜ್ಯಗಳ ವಲಸೆ ಕಾರ್ಮಿಕರು ಕಾರಣ ಎಂದು ಎಂಎನ್ ಎಸ್ (ಮಹಾರಾಷ್ಟ್ರ ನವನಿರ್ಮಾಣ ಸೇನೆ) ಮುಖ್ಯಸ್ಥ ರಾಜ್ ಠಾಕ್ರೆ ಮಂಗಳವಾರ ಹೇಳಿದ್ದಾರೆ.
ಮಹಾರಾಷ್ಟ್ರ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಅವರೊಂದಿಗೆ ವರ್ಚುಯಲ್ ಸಂವಾದದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು , ಮಹಾರಾಷ್ಟ್ರವು ಭಾರತದ ಅತ್ಯಂತ ಕೈಗಾರಿಕೀಕರಣಗೊಂಡ ರಾಜ್ಯವಾಗಿದ್ದು, ಇತರ ರಾಜ್ಯಗಳಿಂದ ಹೆಚ್ಚಿನ ಸಂಖ್ಯೆಯ ಕಾರ್ಮಿಕರನ್ನು ಆಕರ್ಷಿಸುತ್ತದೆ. ಈ ಕಾರ್ಮಿಕರು ಬರುವ ಸ್ಥಳಗಳಲ್ಲಿ ಅಗತ್ಯ ಪರೀಕ್ಷಾ ಸೌಲಭ್ಯಗಳಿರುವುದಿಲ್ಲ ಎಂದು ದೂರಿದ್ದಾರೆ.
ಕಳೆದ ವರ್ಷದ ಲಾಕ್‌ಡೌನ್ ಸಮಯದಲ್ಲಿ, ತಮ್ಮ ತಮ್ಮ ಸ್ಥಳಗಳಿಗೆ ಮರಳಿದ ವಲಸೆ ಕಾರ್ಮಿಕರನ್ನು ಪರೀಕ್ಷಿಸಬೇಕೆಂದು ನಾನು ಸೂಚಿಸಿದ್ದೆ, ಆದರೆ ಅದನ್ನು ಮಾಡಿಲ್ಲ ಎಂದು ಹೇಳಿದ್ದಾರೆ.
ಇದೇ ಸಂದರ್ಭದಲ್ಲಿ ಕ್ರೀಡಾಪಟುಗಳಿಗೆ ಅಭ್ಯಾಸ ನಡೆಸಲು ಅವಕಾಶ ನೀಡುವಂತೆ ಮತ್ತು ಜಿಮ್‌ಗಳನ್ನು ಸಾಮಾಜಿಕ ಅಂತರ ಕಾಯ್ದುಕೊಂಡು ಕಾರ್ಯನಿರ್ವಹಿಸಲು ಅನುಮತಿ ನೀಡುವಂತೆ ಸಿಎಂಗೆ ಕೇಳಿಕೊಂಡಿರುವುದಾಗಿ ರಾಜ್ ಠಾಕ್ರೆ ತಿಳಿಸಿದರು.