ಮಣಿಪುರದಲ್ಲಿ 21 ಕೋಟಿ ಮೌಲ್ಯದ ಹೆರಾಯಿನ್ ವಶ: ಮೂವರು ಡ್ರಗ್ ಪೆಡ್ಲರ್ ಗಳ ಬಂಧನ

ಮಣಿಪುರದ ರಾಜ್ಯ ಪೊಲೀಸರು ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ 21 ಕೋಟಿ ರೂ.ಗೂ ಹೆಚ್ಚು ಮೌಲ್ಯದ 10.565 ಕಿಲೋಗ್ರಾಂ ನಿಷಿದ್ಧ ಹೆರಾಯಿನ್ ಪುಡಿಯನ್ನು ವಶಪಡಿಸಿಕೊಂಡಿದ್ದಾರೆ. ರಾಷ್ಟ್ರೀಯ ಹೆದ್ದಾರಿ -2 (ಇಂಫಾಲ್-ದಿಮಾಪುರ್) ಉದ್ದಕ್ಕೂ ಈ ಕಾರ್ಯಾಚರಣೆ ನಡೆದಿದ್ದು, ದಂಪತಿ ಸೇರಿದಂತೆ ಮೂವರು ಡ್ರಗ್ ಪೆಡ್ಲರ್ ಗಳನ್ನು ಬಂಧಿಸಲಾಗಿದೆ.
ಮಾದಕವಸ್ತು ಸಾಗಣೆಗೆ ಸಂಬಂಧಿಸಿದ ಗುಪ್ತಚರ ಮಾಹಿತಿಯ ಮೇರೆಗೆ, ಸೆಕ್ಮಾಯ್ ಪೊಲೀಸರು, ಇಂಫಾಲ್ ಪಶ್ಚಿಮದ ಪೊಲೀಸ್ ವರಿಷ್ಠಾಧಿಕಾರಿಯ ಮೇಲ್ವಿಚಾರಣೆಯಲ್ಲಿ ಸೆಕ್ಮಾಯ್ ಪೊಲೀಸ್ ಠಾಣೆಯ ಗೇಟ್ ನಲ್ಲಿ ತಪಾಸಣೆ ಕಾರ್ಯಾಚರಣೆ ನಡೆಸಿದರು. ತಂಡವು ಬೊಲೆರೊ ಮತ್ತು ಟಾಟಾ ಹ್ಯಾರಿಯರ್ ಎಂಬ ಎರಡು ವಾಹನಗಳನ್ನು ತಡೆದಿದೆ. ಬೊಲೆರೊ ಚಾಲಕನನ್ನು ಸೇನಾಪತಿ ಜಿಲ್ಲೆಯ ಮೈಬಾ ಗ್ರಾಮದ ಕೆಪಿ ಜಾಕೋಬ್ ಎಂದು ಗುರುತಿಸಲಾಗಿದ್ದು, ವಾಹನದಲ್ಲಿ ಅಡಗಿಸಿಟ್ಟಿದ್ದ ನಿಷಿದ್ಧ ವಸ್ತುಗಳನ್ನು ಸಾಗಿಸಿದ್ದಾಗಿ ಒಪ್ಪಿಕೊಂಡಿದ್ದಾನೆ.
ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 9686399493 ನಂಬರ್ ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ:
https://chat.whatsapp.com/BHOOdLNNvmD17cBJslQgwj