ಅಪಹರಣಕ್ಕೊಳಗಾಗಿರುವ ಯೋಧನ ಫೋಟೋ ಬಿಡುಗಡೆ ಮಾಡಿದ ನಕ್ಸಲರು!
ನವದೆಹಲಿ: ಏಪ್ರಿಲ್ 3ರ ಎನ್ ಕೌಂಟರ್ ಸಂದರ್ಭ ಅಪಹರಣಕ್ಕೊಳಗಾಗಿದ್ದ ಸಿಆರ್ ಪಿಎಫ್ ಕೋಬ್ರಾ ಕಮಾಂಡೋ ರಾಕೇಶ್ವರ ಸಿಂಗ್ ಫೋಟೋವನ್ನು ಮಾವೋವಾದಿಗಳು ಬಿಡುಗಡೆ ಮಾಡಿದ್ದಾರೆ.
ಛತ್ತೀಸ್ ಗಡದ ಬಿಜಾಪುರದಲ್ಲಿ ಸಿಆರ್ ಪಿಎಫ್ ಸಿಬ್ಬಂದಿ ನಕ್ಸಲೈಟ್ ಗಳ ನಡುವೆ ನಡೆದ ಘರ್ಷಣೆಯಲ್ಲಿ 22 ಸೈನಿಕರು ಹುತಾತ್ಮರಾಗಿದ್ದರು ಮತ್ತು ಸಿಆರ್ ಪಿಎಫ್ ಸಿಬ್ಬಂದಿ ರಾಕೇಶ್ವರ ಸಿಂಗ್ ಮನ್ಹಾಸ್ ಅವರನ್ನು ನಕ್ಸಲರು ಅಪಹರಿಸಿದ್ದರು.
ಇಂದು ನಕ್ಸಲರು ಕಮಾಂಡೋ ರಾಜೇಶ್ ಸಿಂಗ್ ಮಾನ್ಹಾಸ್ ಅವರ ಚಿತ್ರವನ್ನು ಕಳುಹಿಸಿದ್ದಾರೆ. ತಾಳೆ ಎಲೆಗಳಿಂದ ಮಾಡಿರುವ ಗುಡಿಸಲಿನಲ್ಲಿ ಅವರು ಕುಳಿತಿರುವುದು ಕಂಡು ಬಂದಿದೆ. ನಕ್ಸಲರ ಬಂಧಿಯಾಗಿರುವ ಅವರು ಅರಣ್ಯ ಪ್ರದೇಶದಲ್ಲಿಯೇ ಇದ್ದಾರೆ ಎಂಬ ಸುಳಿವು ಲಭ್ಯವಾಗಿದೆ. ಪೋಟೋದಲ್ಲಿ ಕಾಣುವಂತೆ ಬಂಡೆ ಕಲ್ಲೊಂದರ ಮೇಲೆ ತಾಳೆಗರಿಯಿಂದ ಮಾಡಿರುವ ಗುಡಿಸಲಿನಂತೆ ಕಂಡು ಬರುವ ಸ್ಥಳ ಕಂಡು ಬಂದಿದೆ.
First pic of 210 Cobra unit commando after encounter. Naxal release #Cobra Commando #Rakeshwar Singh Manhas pic. Official confirmation by @crpfindia.
Process in on. @indiatvnews https://t.co/f5zxEVqepe pic.twitter.com/mDmbVkEOeo— Manish Prasad (@manishindiatv) April 7, 2021