ಬಂಧನದ ನಂತರ ಕುಂಟುತ್ತಾ ಬಂದ ಮಹಿಳೆ ಮೇಲೆ ಹಲ್ಲೆ ನಡೆಸಿದ ಆರೋಪಿಗಳು: ಓವರ್ ಆಕ್ಟಿಂಗ್ ಕಂಡು ನೆಟ್ಟಿಗರು ಶಾಕ್

ಮುಜಫರ್ ನಗರ: ಮಹಿಳೆಯ ಮೇಲೆ ಹಲ್ಲೆ ನಡೆಸಿದ ಆರೋಪ ಹೊತ್ತಿರುವ 6 ಮಂದಿ ವ್ಯಕ್ತಿಗಳು ಪೊಲೀಸರು ಬಂಧಿಸಿದ ನಂತರ ನಾಟಕೀಯವಾಗಿ ಕುಂಟುತ್ತಾ ನಡೆಯುತ್ತಿರುವ ವಿಡಿಯೋ ವೈರಲ್ ಆಗಿದ್ದು, ಇವರ ನಟನೆಗೆ ಆಸ್ಕರ್ ಕೊಡಬೇಕು ಅಂತ ನೆಟ್ಟಿಗರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಉತ್ತರ ಪ್ರದೇಶದ ಮುಜಫರ್ ನಗರದಲ್ಲಿ ಸೋಮವಾರ ಈ ಗುಂಪು ಮಹಿಳೆಯೊಬ್ಬರ ಹಿಜಾಬ್ ಅನ್ನು ಬಿಚ್ಚಿ ಆಕೆಯೊಂದಿಗೆ ಇದ್ದ ಹಿಂದೂ ಪುರುಷನ ಮೇಲೆ ಹಲ್ಲೆ ನಡೆಸಿತ್ತು. ಈ ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಭಾರೀ ಆಕ್ರೋಶಕ್ಕೆ ಕಾರಣವಾಗಿತ್ತು.
A group of self-proclaimed moral police harassed a Muslim girl and her colleague, pulling off her burqa and assaulting them in Muzaffarnagar.
Yogi Police acted swiftly—now these goons are in custody, turned into “peacocks” parading in the police station.
Justice served! pic.twitter.com/hu6f4wC3Nw
— Megh Updates 🚨™ (@MeghUpdates) April 13, 2025
ಇದರ ಬೆನ್ನಲ್ಲೇ ಮಹಿಳೆ ಆರೋಪಿಗಳ ವಿರುದ್ಧ ದೂರು ದಾಖಲಿಸಿದ್ದರು. ಮಹಿಳೆಯ ದೂರಿನನ್ವಯ ಆರೋಪಿಗಳನ್ನು ಪೊಲೀಸರು ಬಂಧಿಸಿದ್ದರು. ಪೊಲೀಸ್ ಠಾಣೆಯಲ್ಲಿ ಪೊಲೀಸರು ಆರೋಪಿಗಳನ್ನು ಕರೆದೊಯ್ಯುತ್ತಿದ್ದ ವೇಳೆ ಆರೋಪಿಗಳು ಏಕಾಏಕಿ ಕುಂಟುತ್ತಾ, ತಾವು ಏಟು ತಿಂದವರಂತೆ ನಟಿಸುತ್ತಾ, ನಡೆಯುತ್ತಾ ಹೋಗುತ್ತಿರುವ ವಿಡಿಯೋ ವೈರಲ್ ಆಗಿದೆ. ಆದ್ರೆ ಇವರ ಓವರ್ ಆಕ್ಟಿಂಗ್ ಕಂಡು ನೆಟ್ಟಿಗರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಹಲ್ಲೆಯ ವಿಡಿಯೋದಲ್ಲಿ ಆರೋಪಿಗಳು ಮಹಿಳೆಯ ಹಿಜಾಬ್ ನ್ನು ಕಸಿದುಕೊಳ್ಳಲು ಯತ್ನಿಸುವುದು ಮತ್ತು ಆಕೆಯನ್ನು ಅಶ್ಲೀಲ ಶಬ್ದಗಳಿಂದ ನಿಂದಿಸುವುದು, ದೈಹಿಕವಾಗಿ ಸ್ಪರ್ಶಿಸಿ ಹಲ್ಲೆ ನಡೆಸುತ್ತಿರುವುದು, ಕಿರುಕುಳ ನೀಡುತ್ತಿರುವುದು ಕಂಡು ಬಂದಿದೆ.
20 ವರ್ಷದ ಫರ್ಹೀನ್ ಮತ್ತು ಸಚಿನ್ ಎಂಬವರು ಸಾಲದ ಕಂತು ಪಾವತಿಸಲು ಹೋಗುತ್ತಿದ್ದ ವೇಳೆ ಈ ಘಟನೆ ನಡೆದಿದೆ. ಮಹಿಳೆಯ ಮೇಲೆ ಗುಂಪು ದೌರ್ಜನ್ಯ ಎಸಗುತ್ತಿರುವ ವಿಡಿಯೋವನ್ನು ಸಾರ್ವಜನಿಕರೊಬ್ಬರು ರೆಕಾರ್ಡ್ ಮಾಡಿಕೊಂಡು ಎಕ್ಸ್ ನಲ್ಲಿ ಹಂಚಿಕೊಂಡಿದ್ದರು.
ಮಾಹಿತಿ ಪಡೆದ ಪೊಲೀಸ್ ಅಧಿಕಾರಿಗಳು ಸ್ಥಳಕ್ಕೆ ಧಾವಿಸಿ ಫರ್ಹೀನ್ ಮತ್ತು ಸಚಿನ್ ಇಬ್ಬರನ್ನೂ ಸುರಕ್ಷಿತವಾಗಿ ಪೊಲೀಸ್ ಠಾಣೆಗೆ ಕರೆದೊಯ್ದರು. ಫರ್ಹೀನ್ ದೂರು ನೀಡಿದ ನಂತರ ಭಾರತೀಯ ನ್ಯಾಯ ಸಂಹಿತಾದ ಸಂಬಂಧಿತ ವಿಭಾಗಗಳ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ.
ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 9686399493 ನಂಬರ್ ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ:
https://chat.whatsapp.com/H1duNIQRfXnJcfQKWPzNqD