Pahalgam Terror Attack: 24ನೇ ತಾರೀಕು ವಾಪಸ್ ಬರ್ತೀವಿ ಎಂದಿದ್ದ ಮಂಜುನಾಥ್ ಉದ್ಯಮಿ ಮಂಜುನಾಥ್ - Mahanayaka

Pahalgam Terror Attack: 24ನೇ ತಾರೀಕು ವಾಪಸ್ ಬರ್ತೀವಿ ಎಂದಿದ್ದ ಮಂಜುನಾಥ್ ಉದ್ಯಮಿ ಮಂಜುನಾಥ್

manjunath rao
22/04/2025

ಚಿಕ್ಕಮಗಳೂರು:  ಕಾಶ್ಮೀರದಲ್ಲಿ ಪ್ರವಾಸಿಗರ ಮೇಲೆ ಉಗ್ರರ ದಾಳಿಯಲ್ಲಿ ಶಿವಮೊಗ್ಗ ಮೂಲದ  ಮಂಜುನಾಥ್ ರಾವ್ ಸಾವನ್ನಪ್ಪಿದ್ದಾರೆ.


Provided by

ಕೊಪ್ಪ ತಾಲೂಕಿನ ಕುಣಿಮಕ್ಕಿ ಮೂಲದ ಮಂಜುನಾಥ್ ರಾವ್ ತಂದೆ ಶಿವಮೊಗ್ಗ ಮ್ಯಾಮ್ ಕೋಸ್ ನಲ್ಲಿ ಮ್ಯಾಮೇಜರ್ ಆಗಿದ್ರು, ನಿವೃತ್ತಿ ಬಳಿಕ ಶಿವಮೊಗ್ಗದಲ್ಲೇ ಮಂಜುನಾಥ್ ರಾವ್ ಸೆಟ್ಲ್ ಆಗಿದ್ದರು

20 ವರ್ಷಗಳ ಹಿಂದೆಯೇ ಶಿವಮೊಗ್ಗ ತೆರಳಿದ್ದ ಮಂಜುನಾಥ್ ರಾವ್ ಕುಟುಂಬ ಶಿವಮೊಗ್ಗದಲ್ಲಿ ರಿಯಲ್‌ ಎಸ್ಟೇಟ್ ಮಾಡಿಕೊಂಡಿಕೊಂಡಿದ್ದರು.  ಪತ್ನಿ ಕಡೂರು ತಾಲೂಕಿನ ಬೀರೂರು ಮ್ಯಾಮ್ ಕೋಸ್ ನಲ್ಲಿ ಮ್ಯಾನೇಜರ್ ಆಗಿದ್ದರು.

19ರಂದು ಮಗನ ಜೊತೆ ದಂಪತಿಗಳು ಕಾಶ್ಮೀರ ಪ್ರವಾಸ ಕೈಗೊಂಡಿದ್ದರು.  ಮಗನ ಪಿಯುಸಿ ಪರೀಕ್ಷೆ ಮುಗಿದ ಬಳಿಕ 6 ದಿನಗಳ ಪ್ಯಾಕೇಜ್ ನಲ್ಲಿ ಕಾಶ್ಮೀರ ಪ್ರವಾಸ ಕೈಗೊಂಡಿದ್ದರು. ಎರಡು ದಿನಗಳ ಹಿಂದೆ ಸಂಬಂಧಿ ಅಶೋಕ್ ಗೆ ಕರೆ ಮಾಡಿದ್ದ ಮಂಜುನಾಥ್ ರಾವ್  24ನೇ ತಾರೀಕು ವಾಪಸ್ ಬರ್ತೀವಿ ಎಂದಿದ್ದರು. ಆದರೆ ಇದೀಗ ಅನ್ಯಾಯವಾಗಿ ಉಗ್ರರ ದಾಳಿಗೆ ಬಲಿಯಾಗಿದ್ದಾರೆ.

ಬಿಜೆಪಿ ಯುವ ಮೋರ್ಚಾ ಕಾರ್ಯಕರ್ತರಿಂದ ಸಂತಾಪ:

ಕಾಶ್ಮೀರದಲ್ಲಿ ಉಗ್ರರ ದಾಳಿಗೆ ಮಂಜುನಾಥ್ ರಾವ್ ಸಾವು ಹಿನ್ನೆಲೆ, ಮಂಜುನಾಥ್ ರಾವ್ ಗೆ ಚಿಕ್ಕಮಗಳೂರು ಬಿಜೆಪಿಗರು ಸಂತಾಪ‌ ಸೂಚಿಸಿದ್ದಾರೆ.

ನಗರದ ಆಶೀರ್ವಾದ ಸರ್ಕಲ್ ನಲ್ಲಿ ಬಿಜೆಪಿ ಯುವ ಮೋರ್ಚಾ ಕಾರ್ಯಕರ್ತರು ಕ್ಯಾಂಡಲ್ ಹಚ್ಚಿ ಸಂತಾಪ ಸೂಚಿಸಿದರು. ಇದೇ ವೇಲೆ  ಉಗ್ರಗಾಮಿಗಳಿಗೆ ಬಿಜೆಪಿ ಕಾರ್ಯಕರ್ತರು ಧಿಕ್ಕಾರ ಕೂಗಿದರು.


ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 9686399493 ನಂಬರ್ ಸೇರಿಸಿ.

ಗ್ರೂಪ್ ಗೆ ಜಾಯಿನ್ ಆಗಿ:

https://chat.whatsapp.com/H1duNIQRfXnJcfQKWPzNqD

ಇತ್ತೀಚಿನ ಸುದ್ದಿ