ದಂಡದಿಂದ ತಪ್ಪಿಸಿಕೊಳ್ಳಲು ಎಂತಹ ಪ್ಲಾನ್ ನೋಡಿ | ಟ್ರಾಫಿಕ್ ಪೊಲೀಸರಿಗೆ ತಲೆನೋವು ತಂದ ಮಹಿಳೆಯರು
ಬೆಂಗಳೂರು: ಸಂಚಾರ ಪೊಲೀಸರಿಗೆ ಹೊಸ ತಲೆ ನೋವು ಆರಂಭವಾಗಿದೆ. ಬೈಕ್ ಸವಾರರನ್ನೇ ಗುರಿಯಾಗಿಸಿ, ಪೊಲೀಸರು ದಂಡ ಹಾಕುತ್ತಿದ್ದಾರೆ ಎನ್ನುವ ಆರೋಪಗಳ ನಡುವೆಯೇ ಇದೀಗ ಪೊಲೀಸರಿಗೆ ಹೊಸ ಸವಾಲೊಂದು ಎದುರಾಗಿದೆ.
ಪೊಲೀಸರಿಗೆ ಸವಾಲಾಗಿರುವುದು ಬೈಕ್ ಚಾಲಕರಲ್ಲ, ಹಿಂದೆ ಕುಳಿತುಕೊಳ್ಳುತ್ತಿರುವ ಮಹಿಳೆಯರಾಗಿದ್ದಾರೆ. ರಸ್ತೆ ಬದಿಯಲ್ಲಿ ಸಂಚಾರ ನಿಯಮಗಳನ್ನು ಉಲ್ಲಂಘಿಸುತ್ತಿರುವ ವಾಹನಗಳ ಚಿತ್ರವನ್ನು ಪೊಲೀಸರು ತೆಗೆಯುತ್ತಿರುತ್ತಾರೆ. ಆದರೆ ಬೈಕ್ ನ ಹಿಂದೆ ಕುಳಿತುಕೊಳ್ಳುವ ಮಹಿಳೆಯರು, ತಮ್ಮ ಸೆರಗನ್ನು ಬೈಕ್ ನ ನಂಬರ್ ಪ್ಲೇಟ್ ಮೇಲೆ ಹಾಕಿ ತಮ್ಮ ಗಂಡನನ್ನು ದಂಡದಿಂದ ಪಾರು ಮಾಡುತ್ತಿದ್ದಾರೆ.
ಕೆಲವು ಮಹಿಳೆಯರು ತಮ್ಮ ಸಾರಿಯ ಸೆರಗನ್ನು ನಂಬರ್ ಪ್ಲೇಟ್ ಗೆ ಹಾಕಿದರೆ, ಇನ್ನು ಕೆಲವು ಮಹಿಳೆಯರು ತಮ್ಮ ಕಾಲನ್ನು ನಂಬರ್ ಪ್ಲೇಟ್ ಗೆ ಅಡ್ಡಗಟ್ಟಿ, ದಂಡದಿಂದ ಪಾರಾಗುತ್ತಿದ್ದಾರೆ.
ಮೊದಲೇ ಲಾಕ್ ಡೌನ್, ಕೊರೊನಾ ಮಾರ್ಗ ಸೂಚಿ ಎಂಬೆಲ್ಲ ನಿಯಮಗಳಿಂದ ಕೈಯಲ್ಲಿ ಹಣವೂ ಇಲ್ಲ, ಇತ್ತ ಸಂಚಾರಿ ನಿಯಮಗಳನ್ನು ಪಾಲಿಸಲೂ ಮುಂದಾಗುವುದಿಲ್ಲ. ಇದರ ನಡುವೆ ದಂಡದಿಂದ ಪಾರಾಗಲು ಕತರ್ನಾಕ್ ಪ್ಲಾನ್ ಗಳನ್ನು ಸಾರ್ವಜನಿಕರು ಮಾಡುತ್ತಿದ್ದಾರೆ.