ಭಾರೀ ಭೂಕಂಪನ: ಇಂಡೋನೇಷ್ಯಾದಲ್ಲಿ 8 ಜನ ಬಲಿ - Mahanayaka
2:20 PM Wednesday 5 - February 2025

ಭಾರೀ ಭೂಕಂಪನ: ಇಂಡೋನೇಷ್ಯಾದಲ್ಲಿ 8 ಜನ ಬಲಿ

earthquake
11/04/2021

ಮಲಾಂಗ್: ಇಂಡೊನೇಷ್ಯಾದ ಪೂರ್ವ ಜಾವಾ ದ್ವೀಪದಲ್ಲಿ ಸಂಭವಿಸಿದ ಭೂಕಂಪದಲ್ಲಿ ಎಂಟು ಮಂದಿ ಮೃತಪಟ್ಟ ದಾರುಣ ಘಟನೆ ನಡೆದಿದ್ದು, 1,300ಕ್ಕೂ ಹೆಚ್ಚು ಕಟ್ಟಡಗಳಿಗೆ ತೀವ್ರ ಸ್ವರೂಪದ ಹಾನಿಯಾಗಿದೆ.

ಜಾವಾ ದ್ವೀಪದ ದಕ್ಷಿಣ ಕರಾವಳಿ ಭಾಗದಲ್ಲಿ ಶನಿವಾರ ಮಧ್ಯಾಹ್ನ 2 ಗಂಟೆಗೆ ಭೂಕಂಪ ಸಂಭವಿಸಿದ್ದು, ರಿಕ್ಟರ್‌ ಮಾಪಕದಲ್ಲಿ ಕಂಪನದ ತೀವ್ರತೆ 6.0ರಷ್ಟು ದಾಖಲಾಗಿದೆ.

ಮಲಾಂಗ್‌ ಜಿಲ್ಲೆಯ ಸಂಬರ್‌ಪುಕುಂಗ್‌ ಪಟ್ಟಣದ ಬಳಿ 82 ಕಿ.ಮೀ ಆಳದಲ್ಲಿ ಕಂಪನದ ಕೇಂದ್ರ ಬಿಂದು ಪತ್ತೆಯಾಗಿದೆ.

ಕ್ಷಣ ಕ್ಷಣದ ಸುದ್ದಿ ಪಡೆಯಲು ಬೆಲ್ ಬಟನ್ ಪ್ರೆಸ್ ಮಾಡಿ

ಇತ್ತೀಚಿನ ಸುದ್ದಿ