ಒಂದೇ ದಿನ 10 ಮಂದಿ ಕೊರೊನಾ ರೋಗಿಗಳು ಸಾವು | ಕಾರಣ ಏನು ಗೊತ್ತಾ? - Mahanayaka
2:24 PM Friday 20 - September 2024

ಒಂದೇ ದಿನ 10 ಮಂದಿ ಕೊರೊನಾ ರೋಗಿಗಳು ಸಾವು | ಕಾರಣ ಏನು ಗೊತ್ತಾ?

maharashtra covid
13/04/2021

ಪಾಲ್ಘರ್:  ಆಮ್ಲಜನಕದ ಕೊರತೆಯಿಂದ ಒಂದೇ ದಿನ  10 ಮಂದಿ ಕೊರೊನಾ ರೋಗಿಗಳು ಸಾವನ್ನಪ್ಪಿರುವ ಘಟನೆ ಮಹಾರಾಷ್ಟ್ರದ ಪಾಲ್ಘರ್ ಜಿಲ್ಲೆಯ ವಾಸೈ ಪಟ್ಟಣ ಆಸ್ಪತ್ರೆಯಲ್ಲಿ ನಡೆದಿದ್ದು, ಇದೀಗ ರಾಜ್ಯವೇ ಬೆಚ್ಚಿಬಿದ್ದಿದೆ.

ವಾಸೈನಲ್ಲಿ 7,000ಕ್ಕೂ ಹೆಚ್ಚು ಕೋವಿಡ್ ಪ್ರಕರಣಗಳು ಸಕ್ರಿಯವಾಗಿದ್ದು, ಈ ಪೈಕಿ 3,000 ಸೋಂಕಿತರಿಗೆ ಆಮ್ಲಜನಕ ಸೌಲಭ್ಯ ಅಗತ್ಯವಿದೆ. ಆದರೆ ಆಮ್ಲಜನಕ ಕೊರತೆಯಿಂದ ನಾಲಾ ಸೋಪಾರದ ವಿನಾಯಕ ಆಸ್ಪತ್ರೆಯಲ್ಲೇ 7 ಸಾವುಗಳು ವರದಿಯಾಗಿವೆ ಎಂದು ಸ್ಥಳೀಯ ಆಡಳಿತ ತಿಳಿಸಿದೆ.

ವಾಸೈ ತಾಲೂಕಿನಲ್ಲಿ ಆಮ್ಲಜನಕದ ಕೊರತೆಯಿದೆ. ಪ್ರಧಾನಿ ನರೇಂದ್ರ ಮೋದಿ ಮತ್ತು ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಅವರು ಈ ಗಂಭೀರ ವಿಷಯದ ಬಗ್ಗೆ ಗಮನಹರಿಸಿ ಸಹಾಯ ಮಾಡಬೇಕೆಂದು ಈ ಸಂಬಂಧ ಪ್ರತಿಕ್ರಿಯಿಸಿರುವ ನಾಲಾ ಸೋಪಾರ ಶಾಸಕ ಕ್ಷಿತಿಜ್ ಠಾಕೂರ್ ಒತ್ತಾಯಿಸಿದ್ದಾರೆ.


Provided by

ಇತ್ತೀಚಿನ ಸುದ್ದಿ