ಆಮ್ಲಜನಕದ ಕೊರತೆ ಇಲ್ಲ ಆದರೆ,  ವ್ಯರ್ಥ ಮಾಡಬೇಡಿ | ರಾಜ್ಯಗಳಿಗೆ ಕೇಂದ್ರ ಆರೋಗ್ಯ ಸಚಿವಾಲಯ ಸೂಚನೆ! - Mahanayaka
5:14 PM Wednesday 11 - December 2024

ಆಮ್ಲಜನಕದ ಕೊರತೆ ಇಲ್ಲ ಆದರೆ,  ವ್ಯರ್ಥ ಮಾಡಬೇಡಿ | ರಾಜ್ಯಗಳಿಗೆ ಕೇಂದ್ರ ಆರೋಗ್ಯ ಸಚಿವಾಲಯ ಸೂಚನೆ!

oxigen cylinder
15/04/2021

ನವದೆಹಲಿ: ವೈದ್ಯಕೀಯ ಆಮ್ಲಜನಕವನ್ನು ವ್ಯರ್ಥ ಮಾಡದೆ ತರ್ಕಬದ್ಧವಾಗಿ ಬಳಸಬೇಕು ಎಂದು ಕೇಂದ್ರ ಸರ್ಕಾರವು ರಾಜ್ಯ ಸರ್ಕಾರಗಳಿಗೆ ಸೂಚನೆ ನೀಡಿದ್ದು, ದೇಶದಲ್ಲಿ ಆಮ್ಲಜನಕದ ಕೊರತೆ ಇಲ್ಲ. ಸಾಕಷ್ಟು ಪ್ರಮಾಣದಲ್ಲಿ ಸಂಗ್ರಹಿಸಿಡಲಾಗಿದೆ. ಉತ್ಪಾದನೆಯನ್ನು ಸಹ ಹೆಚ್ಚಿಸಲಾಗಿದೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ಸ್ಪಷ್ಟಪಡಿಸಿದೆ.

ಕೋವಿಡ್‌-19 ರೋಗಿಗಳಿಗೆ ಚಿಕಿತ್ಸೆ ನೀಡುವಲ್ಲಿ ವೈದ್ಯಕೀಯ ಆಮ್ಲಜನಕ ಅಗತ್ಯವಾಗಿದೆ. ಅಗತ್ಯಕ್ಕೆ ತಕ್ಕಂತೆ ಜಿಲ್ಲೆಗಳಿಗೆ ಸುಗಮವಾಗಿ ಆಮ್ಲಜನಕ ಪೂರೈಸಲು ಅನುಕೂಲವಾಗುವಂತೆ ‘ನಿಯಂತ್ರಣಾ ಕೊಠಡಿ’ಗಳನ್ನು ಸ್ಥಾಪಿಸಬೇಕು. ಸಿಲಿಂಡರ್‌ಗಳ ಅಗತ್ಯವನ್ನು ಪ್ರತಿನಿತ್ಯ ಪರಿಶೀಲಿಸಬೇಕು ಎಂದು ಸಚಿವಾಲಯ ತಿಳಿಸಿದೆ.

 ದೇಶದಲ್ಲಿ ಪ್ರತಿ ದಿನ 7127 ಮೆಟ್ರಿಕ್ ಟನ್‌ನಷ್ಟು ಆಮ್ಲಜನಕ ಉತ್ಪಾದಿಸುವ ಸಾಮರ್ಥ್ಯ ಇದೆ. ಕಳೆದ ಎರಡು ದಿನಗಳಿಂದ ಶೇಕಡ 100ರಷ್ಟು ಉತ್ಪಾದನೆಯಾಗುತ್ತಿದೆ. ಜತೆಗೆ, ಅಗತ್ಯಕ್ಕೆ ತಕ್ಕಂತೆ ಉಕ್ಕು ಕಾರ್ಖಾನೆಗಳಿಂದಲೂ ಹೆಚ್ಚುವರಿಯಾಗಿ ಆಮ್ಲಜನಕ ಲಭ್ಯವಾಗುವಂತೆ ಪೂರಕ ಕ್ರಮಗಳನ್ನು ಕೈಗೊಳ್ಳಲಾಗುವುದು ಎಂದು ಸಚಿವಾಲಯವು ತಿಳಿಸಿದೆ.

 ಏಪ್ರಿಲ್‌ 12ರಂದು ದೇಶದಲ್ಲಿ 3842 ಮೆಟ್ರಿಕ್‌ ಟನ್‌ಗಳಷ್ಟು ವೈದ್ಯಕೀಯ ಆಮ್ಲಜನಕ ಬಳಕೆ ಮಾಡಲಾಗಿತ್ತು. ಅಂದರೆ, ಪ್ರತಿ ದಿನ ಉತ್ಪಾದನೆಯಾಗುವ ಆಮ್ಲಜನಕದಲ್ಲಿ ಶೇಕಡ 50ರಷ್ಟು ಬಳಕೆ ಮಾಡಲಾಗಿತ್ತು ಎಂದು ವಿವರಿಸಿದೆ.

ಇತ್ತೀಚಿನ ಸುದ್ದಿ