ಸಾಲುಮರದ ತಿಮ್ಮಕ್ಕನ ಅಭಿಮಾನಿ, ತಮಿಳು ನಟ ವಿವೇಕ್ ಇನ್ನಿಲ್ಲ! - Mahanayaka
8:38 AM Wednesday 11 - December 2024

ಸಾಲುಮರದ ತಿಮ್ಮಕ್ಕನ ಅಭಿಮಾನಿ, ತಮಿಳು ನಟ ವಿವೇಕ್ ಇನ್ನಿಲ್ಲ!

vivek
17/04/2021

ಚೆನ್ನೈ: ಹಲವು ವರ್ಷಗಳಿಂದ ತಮಿಳುನಾಡಿನ ಜನರನ್ನು ಮಾತ್ರವಲ್ಲದೇ ಇಡೀ ದೇಶದ ಜನರನ್ನು ನಗಿಸಿದ್ದ ಹಾಸ್ಯನಟ ವಿವೇಕ್ ಅವರು ತಮ್ಮ 59ನೇ ವಯಸ್ಸಿನಲ್ಲಿ ಇಂದು ನಿಧನರಾಗಿದ್ದು, ಅವರ ನಿಧನಕ್ಕೆ ಇಡೀ ದೇಶದಲ್ಲಿರುವ ಅವರ ಅಭಿಮಾನಿಗಳು ಕಂಬನಿ ಮಿಡಿದಿದ್ದಾರೆ.

ಹೃದಯನಾಳದಲ್ಲಿ ರಕ್ತ ಸಂಚಾರದಲ್ಲಿ ತೊಂದರೆಯಾದ ಕಾರಣ ಅವರು ನಿನ್ನೆ ತೀವ್ರ ಅನಾರೋಗ್ಯಕ್ಕೀಡಾಗಿದ್ದು, ಪ್ರಜ್ಞಾಹೀನ ಸ್ಥಿತಿಗೆ ತಲುಪಿದ್ದರು.  ನಿನ್ನೆ ಅವರಿಗೆ ತುರ್ತಾಗಿ ಅಂಜಿಯೋಪ್ಲಾಸ್ಟಿ ಹಾಗೂ ಸ್ಟಂಟ್  ಅಳವಡಿಕೆ ಮಾಡಲಾಗಿತ್ತು.

ಗುರುವಾರವಷ್ಟೇ ವಿವೇಕ್ ಅವರು ಕೊರೊನಾ ಲಸಿಕೆ ಪಡೆದುಕೊಂಡಿದ್ದರು. ಲಸಿಕೆ ಪಡೆದಿರುವುದರಿಂದಲೇ ಅವರಿಗೆ ಹೃದಯಾಘಾತವಾಗಿದೆ ಎಂದು ವ್ಯಾಪಕ ಚರ್ಚೆಯಾಗುತ್ತಿದೆ. ಆದರೆ, ವೈದ್ಯರು ಇದನ್ನು ನಿರಾಕರಿಸಿದ್ದು,  ಕೊರೊನಾ ಲಸಿಕೆಗೂ ಅವರ ಅನಾರೋಗ್ಯಕ್ಕೂ ಯಾವುದೇ ಸಂಬಂಧವಿಲ್ಲ ಎಂದು ಹೇಳಿದ್ದಾರೆ.

1980ರಿಂದ ತಮಿಳು ಚಿತ್ರರಂಗದಲ್ಲಿ ಹಾಸ್ಯನಟರಾಗಿ ಗುರುತಿಸಿಕೊಂಡಿದ್ದ ವಿವೇಕ್, ಅಪಾರ ಅಭಿಮಾನಿಗಳನ್ನು ಗಳಿಸಿದ್ದರು. ಹಲವು ಸ್ಟಾರ್ ನಟರ ಚಿತ್ರಗಳಲ್ಲಿ ಪ್ರಮುಖ ಹಾಸ್ಯ ಪಾತ್ರಗಳಲ್ಲಿ ವಿವೇಕ್ ಮಿಂಚಿದ್ದರು. ದೊಡ್ಡದೊಡ್ಡ ಸ್ಟಾರ್ ಗಳ ಚಿತ್ರ ಸೇರಿದಂತೆ ಇತ್ತೀಚೆಗೆ ಬೆಳಕಿಗೆ ಬಂದಿರುವ ಹೊಸ ಮುಖದ ನಟರ ಜೊತೆಗೆ ಕೂಡ ಹಾಸ್ಯನಟರಾಗಿ ಅವರು ಅಭಿನಯಿಸಿದ್ದರು.

ಕಳೆದ ವರ್ಷವಷ್ಟೇ ಸಾಲುಮರದ ತಿಮ್ಮಕ್ಕ ಅವರ ಬಗ್ಗೆ ಸಭೆಯೊಂದರಲ್ಲಿ ನಿರ್ಗಳವಾಗಿ ಮಾತನಾಡುವ ಮೂಲಕ ಕನ್ನಡಿಗರ ಮನಸ್ಸನ್ನು ಕೂಡ ಗೆದ್ದಿದ್ದರು. ವಾಸ್ತವವಾಗಿ ವಿವೇಕ್ ಅವರು ಒಬ್ಬರು ಪರಿಸರ ಪ್ರೇಮಿ ಕೂಡ ಹೌದು. ಅವರು ಸಾಲು ಮರದ ತಿಮ್ಮಕ್ಕನಂತೆಯೇ ಮರಗಳನ್ನು ನೆಡೆಬೇಕು ಎಂಬ ಆಸೆಯನ್ನು ಹೊಂದಿದ್ದರು. ಈಗಾಗಲೇ ಅವರು ಸಾವಿರಾರು ಮರಗಳನ್ನು ನೆಟ್ಟಿದ್ದಾರೆ. 1 ಲಕ್ಷ ಮರಗಳನ್ನು ತಾನು ನೆಡಬೇಕು ಎಂಬ ಕನಸು ಕಂಡಿದ್ದರು.

ಇತ್ತೀಚಿನ ಸುದ್ದಿ