ಬೆಂಗಳೂರಿನ ಮೂಲೆಮೂಲೆಗಳಲ್ಲಿಗೂ ಕೊರೊನಾ ಸಾವು | ಚಿತಗಾರದಲ್ಲಿ ಮೃತದೇಹಗಳ ಸಂಖ್ಯೆ ಏರಿಕೆ!

ಬೆಂಗಳೂರು: ಕೊರೊನಾ ಎರಡನೇ ಏಟು ಬಹಳ ಬಲವಾಗಿದ್ದು, ಬೆಂಗಳೂರಿನಲ್ಲಿ ಕೊರೊನಾದ ಹಾವಳಿಗೆ ಜನರು ತತ್ತರಿಸಿದ್ದು, ಇದೀಗ ಗಲ್ಲಿಗಲ್ಲಿಯಲ್ಲಿಯೂ ಕೊರೊನಾದಿಂದ ಸಾವು ಸಂಭವಿಸಿದ್ದು, ಚಿತಾಗಾರದಲ್ಲಿ ಅಂತ್ಯಸಂಸ್ಕಾರಕ್ಕೆ ಕೂಡ ಶವಗಳ ಸಂಖ್ಯೆ ಅಧಿಕವಾಗಿದೆ ಎಂದು ಹೇಳಲಾಗಿದೆ.
ಕೊರೊನಾದಿಂದ ಸಾವನ್ನಪ್ಪಿರುವ ವ್ಯಕ್ತಿಗಳ ರೋದನೆ ಕೇಳಲು ಸಾಧ್ಯವಾಗುತ್ತಿಲ್ಲ. ಇನ್ನೊಂದೆಡೆ ಕೊರೊನಾದಿಂದ ಮೃತಪಟ್ಟವರ ಅಂತ್ಯಸಂಸ್ಕಾರಕ್ಕೆ ಸಂಬಂಧಿಕರು, ಕುಟುಂಬಸ್ಥರು ಬರಲು ಹಿಂದೇಟು ಹಾಕುತ್ತಿದ್ದು, ಇದರಿಂದಾಗಿ ಚಿತಗಾರದ ಸಿಬ್ಬಂದಿಯೇ ಅಂತ್ಯಸಂಸ್ಕಾರ ನಡೆಸುತ್ತಿದ್ದಾರೆ ಎಂದು ತಿಳಿದು ಬಂದಿದೆ.
ಇನ್ನೂ ಕೊರೊನಾ ಪ್ರಕರಣ ಏರಿಕೆಯ ಬಗ್ಗೆ ಇಂದು ಆರೋಗ್ಯ ಸಚಿವರು, ಗೃಹ ಸಚಿವರು ಸೇರಿದಂತೆ ಇನ್ನಿತರ ಸಚಿವರು ಮಹತ್ವದ ಸಭೆ ನಡೆಸಲಿದ್ದಾರೆ ಎಂದು ಹೇಳಲಾಗಿದೆ. ಇನ್ನೊಂದೆಡೆ ಮುಖ್ಯಮಂತ್ರಿ ಯಡಿಯೂರಪ್ಪನವರಿಗೂ ಕೊರೊನಾ ಬಂದಿದ್ದು, ಸಂಕಷ್ಟದ ಕಾಲದಲ್ಲಿ ಹೊಸ ಸಂಕಷ್ಟ ಎಂಬಂತಾಗಿದೆ. ಮುಖ್ಯಮಂತ್ರಿಗಳ ಅನುಪಸ್ಥಿತಿಯಲ್ಲಿ ಕೊವಿಡ್ ನಿಯಂತ್ರಣವನ್ನು ಹೇಗೆ ಇತರ ಸಚಿವರು ನಿಭಾಯಿಸುತ್ತಾರೆ ಎನ್ನುವುದನ್ನು ಕಾದು ನೋಡಬೇಕಿದೆ.
ಇನ್ನೂ ಇದೇ ಸಂದರ್ಭದಲ್ಲಿ ಸರ್ಕಾರ ಜನತೆಗೆ ಧೈರ್ಯ ಹೇಳಿದ್ದು, ಯಾರು ಕೂಡ ಭಯಪಡಬೇಡಿ, ಸೋಂಕಿತರ ಚಿಕಿತ್ಸೆಗೆ ಬೇಕಾದಷ್ಟು ಚುಚ್ಚುಮದ್ದು ಇದೆ. ಯಾರು ಕೂಡ ಹೆದರುವ ಅಗತ್ಯವಿಲ್ಲ ಎಂದು ಹೇಳಿದ್ದಾರೆ.