ಸರ್ಪದೋಷ ನಿವಾರಣೆಗೆ ಈ ಮಹಿಳೆ ಮಾಡಿದ್ದೇನು ಗೊತ್ತಾ? | ದೇಶವನ್ನೇ ಬೆಚ್ಚಿಬೀಳಿಸಿದ ಘಟನೆ! - Mahanayaka
6:15 PM Thursday 12 - December 2024

ಸರ್ಪದೋಷ ನಿವಾರಣೆಗೆ ಈ ಮಹಿಳೆ ಮಾಡಿದ್ದೇನು ಗೊತ್ತಾ? | ದೇಶವನ್ನೇ ಬೆಚ್ಚಿಬೀಳಿಸಿದ ಘಟನೆ!

sarpa dosha
18/04/2021

ಹೈದರಾಬಾದ್: ಸರ್ಪದೋಷ ನಿವಾರಣೆಗಾಗಿ ಮಹಿಳೆಯೊಬ್ಬರು ತನ್ನ 6 ತಿಂಗಳ ಮಗುವನ್ನೇ ಹತ್ಯೆ ಮಾಡಿರುವ ಘಟನೆ  ತೆಲಂಗಾಣದ ಸೂರ್ಯಪೇಟೆ ಜಿಲ್ಲೆಯಲ್ಲಿ ನಡೆದಿದ್ದು,  32 ವರ್ಷ ವಯಸ್ಸಿನ ಮಹಿಳೆ ಭಾರತಿ ತನ್ನ ಮೌಢ್ಯತೆಯಿಂದ ಮಗುವನ್ನು ಬಲಿ ಪಡೆದಿದ್ದಾಳೆ.

ಮೊದಲ ಪತಿಯಿಂದ ವಿಚ್ಛೇದನ ಪಡೆದಿದ್ದ ಮಹಿಳೆ ಎರಡನೇ ವಿವಾಹವಾಗಿದ್ದು, ಇವರಿಗೆ 6 ತಿಂಗಳ ಮಗು ಇತ್ತು. ಈ ನಡುವೆ ಮೇಲಿಂದ ಮೇಲೆ ಸಮಸ್ಯೆಗಳು ಬರುತ್ತಿದ್ದು, ಇದಕ್ಕೆ ಕಾರಣ ಏನು ಎಂದು ತಿಳಿಯದೇ ಕಂಡಕಂಡವರಲ್ಲಿ ಭಾರತಿ ವಿಚಾರಿಸುತ್ತಿದ್ದಳು. ಈ ವೇಳೆ, ಸರ್ಪದೋಷದಿಂದಾಗಿ ಇದೆಲ್ಲ ನಡೆಯುತ್ತಿದೆ ಎಂದು ಯಾರೋ ಮಹಿಳೆಗೆ ಹೇಳಿದ್ದಾರೆ.

ಸರ್ಪದೋಷ ಮುಕ್ತಿ ಹೊಂದುವುದು ಹೇಗೆ ಎಂದು ಯೋಚಿಸಿದರ ಮಹಿಳೆ ಯೂಟ್ಯೂಬ್ ನಲ್ಲಿ ಮಾಹಿತಿಗೆ ಹುಡುಕಾಡಿದ್ದು, ಈ ವೇಳೆ ಮಗುವನ್ನು ಬಲಿ ನೀಡಿದರೆ, ಸರ್ಪದೋಷ ನಿವಾರಣೆಯಾಗುತ್ತದೆ ಎಂದು ಅಲ್ಲಿ ಮಾಹಿತಿ ಸಿಕ್ಕಿದೆ ಎಂದು ತಿಳಿದು ಬಂದಿದೆ.

ಇತ್ತ ಯೂಟ್ಯೂಬ್ ನಲ್ಲಿದ್ದ ವಿವರ ಪಡೆದುಕೊಂಡ ಮಹಿಳೆ ಅಂತೆಯೇ ತನ್ನ ಮಗುವನ್ನು ಹತ್ಯೆ ಮಾಡಿದ್ದು, ಬಳಿಕ ತನ್ನ ಕುಟುಂಬಸ್ಥರಿಗೆ ಕರೆ ಮಾಡಿ, ಇನ್ನು ನಮಗೆ ಯಾವುದೇ ದೋಷ ಬರುವುದಿಲ್ಲ, ತಾನು ದೋಷ ಪರಿಹಾರ ಮಾಡಿದ್ದೇನೆ ಎಂದು ಹೇಳಿದ್ದಾಳೆ ಎಂದು ತಿಳಿದು ಬಂದಿದೆ. ಘಟನೆಗೆ ಸಂಬಂಧಿಸಿದಂತೆ ಕುಟುಂಬಸ್ಥರು ಪೊಲೀಸರಿಗೆ ಮಾಹಿತಿ ನೀಡಿದ್ದು, ಪೊಲೀಸರು ಮಹಿಳೆಯನ್ನು ಬಂಧಿಸಿದ್ದಾರೆ.

ಇತ್ತೀಚಿನ ಸುದ್ದಿ