ಸರ್ಕಾರದ ಗೈಡ್ ಲೈನ್ಸ್ ಎಂದು ಸುಳ್ಳು ಸುದ್ದಿ ಬಿತ್ತರಿಸಿದ ಮಾಧ್ಯಮಗಳು | ಕೊರೊನಾದ ನಡುವೆ ಮಾಧ್ಯಮಗಳ ಕಣ್ಣಮುಚ್ಚಾಲೆಯಾಟ - Mahanayaka

ಸರ್ಕಾರದ ಗೈಡ್ ಲೈನ್ಸ್ ಎಂದು ಸುಳ್ಳು ಸುದ್ದಿ ಬಿತ್ತರಿಸಿದ ಮಾಧ್ಯಮಗಳು | ಕೊರೊನಾದ ನಡುವೆ ಮಾಧ್ಯಮಗಳ ಕಣ್ಣಮುಚ್ಚಾಲೆಯಾಟ

fake news
19/04/2021

ಬೆಂಗಳೂರು: ನಾಳೆಯಿಂದ ರಾತ್ರಿ 9 ಗಂಟೆಯಿಂದ ರಾಜ್ಯದಲ್ಲಿ ಎಲ್ಲ ಬಂದ್ ಆಗುತ್ತದೆ ಎಂಬ ಬಗ್ಗೆ ಮಾಧ್ಯಮ ವರದಿಗಳು ಬರುತ್ತಿದ್ದು, ಆದರೆ, ವಾಸ್ತವವಾಗಿ ರಾಜ್ಯ ಸರ್ಕಾರ ಇಂತಹದ್ದೊಂದು ಆದೇಶವನ್ನೇ ಹೊರಡಿಸಿಲ್ಲ ಎಂದು ಹೇಳಲಾಗಿದೆ.

ಸರ್ಕಾರವು ಯಾವುದೇ ಗೈಡ್ ಲೈನ್ಸ್ ಬಿಡುಗಡೆ ಮಾಡಿಲ್ಲ. ಆದರೆ ಕೆಲವು ಮಾಧ್ಯಮಗಳು ಈ ಬಗ್ಗೆ ಗೊಂದಲ ಸೃಷ್ಟಿಸಿದ್ದರಿಂದಾಗಿ ನಾಳೆಯಿಂದ ರಾತ್ರಿ 9 ಗಂಟೆಯಿಂದ ರಾಜ್ಯದಲ್ಲಿ ಎಲ್ಲವೂ ಬಂದ್ ಆಗಲಿದೆ ಎಂದು ಹೇಳಿದ್ದರು. ಮಸೀದಿ, ಮಂದಿರಗಳು ಸೇರಿದಂತೆ ಎಲ್ಲವೂ ಬಂದ್ ಆಗಲಿದೆ ಎಂದು ಮಾಧ್ಯಮಗಳ ವರದಿಯಲ್ಲಿ ಹೇಳಲಾಗಿತ್ತು.

ಆದರೆ ವಾಸ್ತವವಾಗಿ ಮಾಧ್ಯಮಗಳು, ಸರ್ಕಾರ ಈ ರೀತಿಯದ್ದೆಲ್ಲ, ಮಾರ್ಗ ಸೂಚಿಗಳನ್ನು ಬಿಡುಗಡೆ ಮಾಡಬಹುದಾದ ಸಾಧ್ಯತೆಗಳಿವೆ ಎಂದು ಮಾಧ್ಯಮಗಳು ಹೇಳಿವೆ. ಆದರೆ ಸಾರ್ವಜನಿಕವಾಗಿ ಈ ವರದಿಗಳು ಗೊಂದಲಗಳನ್ನು ಸೃಷ್ಟಿ ಮಾಡಿದೆ.

ಮಾಧ್ಯಮಗಳು ಸರ್ಕಾರದ ಗೈಡ್ ಲೈನ್ಸ್ ಎಂದು ಜನರನ್ನು ದಾರಿ ತಪ್ಪಿಸಿವೆ. ಕೊನೆಯ ಕ್ಷಣದಲ್ಲಿ ಇಂತಹದ್ದೊಂದು ಗೈಡ್ ಲೈನ್ಸ್ ಬಂದಿಲ್ಲ ಎಂದು ವರದಿ ಮಾಡಿರುವುದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ.

ಇತ್ತೀಚಿನ ಸುದ್ದಿ