ಕೊರೊನಾದಿಂದ ಪಾರಾಗಲು ಈ ಕಲಾವಿದ ಮಾಡಿದ ಪ್ಲಾನ್ ನೋಡಿ
20/04/2021
ಬೆಲ್ಜಿಯಂ: ಕೊರೊನಾದಿಂದ ಪಾರಾಗಲು ದೇಶದಲ್ಲಿ ಎಂತೆಂತಹದ್ದೋ ಸಾಹಸಗಳನ್ನು ಜನರು ಮಾಡುತ್ತಿದ್ದಾರೆ ಈ ನಡುವೆ ಬೆಲ್ಜಿಯಂನ ಕಲಾವಿದ ಹಾಗೂ ಸಾಮಾಜಿಕ ಕಾರ್ಯಕರ್ತ ಅಲೈನ್ ವರ್ಸ್‌ಚುರೆನ್ ಅವರು ಮಾಡಿರುವ ಕೆಲಸ ಜನರ ಮೆಚ್ಚುಗೆಗೆ ಪಾತ್ರವಾಗಿದೆ.
ಅಲೈನ್ ವರ್ಸ್‌ಚುರೆನ್ ಎಂಬವರು ಕುತ್ತಿಗೆಯ ಸುತ್ತೆಲ್ಲ ಪೋರ್ಟೆಬಲ್ ಒಯಸಿಸ್ ಹಾಕಿಕೊಂಡು ತಿರುಗುವ ಮೂಲಕ ಭಾರೀ ಸುದ್ದಿಯಾಗ್ತಿದ್ದಾರೆ. ಇದೊಂದು ಮಿನಿ ಗ್ರೀನ್ ಹೌಸ್ ಆಗಿದ್ದು ಇದರಲ್ಲಿ ಅರೊಮ್ಯಾಟಿಕ್ ಗಿಡಗಳಿವೆ. ಇವುಗಳ ಸಹಾಯದಿಂದ ಅಲೈನ್ ಶುದ್ಧ ಗಾಳಿಯನ್ನ ಉಸಿರಾಡುತ್ತಾರೆ.
61 ವರ್ಷದ ಅಲೈನ್ 15 ವರ್ಷಗಳ ಹಿಂದೆಯೇ ಈ ಉಪಾಯವನ್ನು ಅವರು ಕಂಡು ಹಿಡಿದಿದ್ದರು. ಟುನೇಶಿಯಾಸ ಓಯಸ್ಗಳಿಂದ ಪ್ರೇರಣೆ ಪಡೆದು ಅವರು ಮಾಡಿರುವ ಪ್ಲಾನ್ ಇದೀಗ ಕೊವಿಡ್ 19 ಸಂದರ್ಭದಲ್ಲಿ ಸಹಾಯಕವಾಗಿದೆ.
ಯುರೋಪ್ ನಲ್ಲಿ ಕೊರೊನಾ ಹಿನ್ನೆಲೆಯಲ್ಲಿ ಮುಖವನ್ನು ಸಂಪೂರ್ಣವಾಗಿ ಮುಚ್ಚಿಕೊಳ್ಳುವುದು ಕಡ್ಡಾಯವಾಗಿದೆ. ಇದೇ ಸಂದರ್ಭದಲ್ಲಿ ಅಲೈನ್ ವರ್ಸ್‌ಚುರೆನ್ ಅವರ ಸಂಶೋಧನೆ ಜನರ ಆಕರ್ಷಕ ಬಿಂದುವಾಗಿದೆ.