ಬಾಲಕಿಯ ಅತ್ಯಾಚಾರ: ನಟ ಭಾರ್ಗವ್ ಬಂಧನ | “ಓ ಮೈಗಾಡ್” ಗರ್ಲ್ ನೀಡಿದ ಸ್ಪಷ್ಟನೆ ಏನು?

ವಿಜಯವಾಡ: ಅಪ್ರಾಪ್ತ ವಯಸ್ಸಿನ ಬಾಲಕಿಯನ್ನು ಟಿಕ್ ಟಾಕ್ ವಿಡಿಯೋ ಹೆಸರಿನಲ್ಲಿ ತನ್ನ ಅಧೀನದಲ್ಲಿಟ್ಟು ಅತ್ಯಾಚಾರ ನಡೆಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಟಿಕ್ ಟಾಕ್ ಸ್ಟಾರ್ ಆಂಧ್ರಪ್ರದೇಶದ ವಿಶಾಖಪಟ್ಟಣಂನಲ್ಲಿ ನಟ ಭಾರ್ಗವ್ ವಿರುದ್ಧ ಫೋಕ್ಸೊ ಕಾಯ್ದೆಯಡಿಯಲ್ಲಿ ದೂರು ದಾಖಲಾಗಿದೆ.
ಭಾರ್ಗವ್ ವಿರುದ್ಧ ದೂರು ದಾಖಲಾಗಿರುವ ಬೆನ್ನಲ್ಲೇ ಭಾರ್ಗವ್ ಜೊತೆಗೆ ಟಿಕ್ ಟಾಕ್ ನಲ್ಲಿ ಮಿಂಚಿದ್ದ, ನಿತ್ಯಾ ಎನ್ನುವ ಹುಡುಗಿಯ ಹೆಸರು ಕೂಡ ಕೇಳಿ ಬಂದಿದ್ದು, ಓ ಮೈಗಾಡ್ ಖ್ಯಾತಿಯ ನಿತ್ಯಾ ಮೇಲೆ ದೌರ್ಜನ್ಯ ನಡೆದಿದೆ ಎಂದು ಯೂಟ್ಯೂಬರ್ ಗಳು, ಮೀಮ್ಸ್ ಕ್ರಿಯೇಟರ್ಸ್ ಪೋಸ್ಟ್ ಮಾಡಿದ್ದರು.
ಇದರ ಬೆನ್ನಲ್ಲೇ ಓಮೈಗಾಡ್ ಗರ್ಲ್ ಎಂದೇ ಖ್ಯಾತಿ ಪಡೆದಿರುವ ನಿತ್ಯಾ ಈ ಬಗ್ಗೆ ಸ್ಪಷ್ಟನೆ ನೀಡಿದ್ದು, ತಮ್ಮ ತಾಯಿಯ ಜೊತೆಗೆ ಲೈವ್ ಬಂದು ಅವರು ಈ ಸ್ಪಷ್ಟನೆ ನೀಡಿದ್ದಾರೆ. ಪ್ರಸ್ತುತ ತನಗೂ ಭಾರ್ಗವ್ ಗೂ ಯಾವುದೇ ಸಂಬಂಧಗಳಿಲ್ಲ. ನಾನು ಒಂದು ವರ್ಷಗಳಿಂದ ಭಾರ್ಗವ್ ನನ್ನು ಸಂಪರ್ಕಿಸಿಯೇ ಇಲ್ಲ. ಅವನೊಂದಿಗೆ ಶೂಟಿಂಗ್ ಕೂಡ ಮಾಡಿಲ್ಲ. ಸದ್ಯ ತಾನು ಚಿತ್ರವೊಂದರಲ್ಲಿ ನಟಿಸುತ್ತಿದ್ದು, ಅದರ ಶೂಟಿಂಗ್ ನಲ್ಲಿದ್ದೇನೆ ಎಂದು ಸ್ಪಷ್ಟಪಡಿಸಿದ್ದಾರೆ.
ಇನ್ನೂ ಭಾರ್ಗವ್ ನ ಪ್ರಕರಣದಲ್ಲಿ ನನ್ನನ್ನು ಥಳಕು ಹಾಕಲು ಪ್ರಯತ್ನಿಸುತ್ತಿದ್ದಾರೆ. ನೀವ್ಯಾರು ಕೂಡ ಉದ್ದೇಶ ಪೂರ್ವಕವಾಗಿ ಆ ವಿಡಿಯೋ ಮಾಡದೇ ಇದ್ದರೆ, ಅವುಗಳನ್ನು ಡಿಲೀಟ್ ಮಾಡುತ್ತೀರಿ ಎಂದು ನಾನು ನಂಬಿದ್ದೇನೆ ಎಂದು ನಿತ್ಯ ಹೇಳಿದ್ದಾಳೆ.
ಭಾರ್ಗವ್ ಹಾಗೂ ನಿತ್ಯಾ ಹಲವಾರು ಟಿಕ್ ಟಾಕ್ ವಿಡಿಯೋ ಮಾಡಿದ್ದಾರೆ. ಈ ವಿಡಿಯೋಗಳಲ್ಲಿ ನಿತ್ಯಾ ಹೇಳುವ ಓ ಮೈಗಾಡ್ ಡೈಲಾಗ್ ಗೆ ಜನರು ಫಿದಾ ಆಗಿದ್ದರು. ಒಳ್ಳೆಯ ಭವಿಷ್ಯ ಇದ್ದ ಭಾರ್ಗವ್ ಇಂತಹ ಕೆಲಸ ಮಾಡಿದ್ದಾನೆ ಎಂದರೆ ಯಾರಿಂದಲೂ ನಂಬಲು ಸಾಧ್ಯವಾಗುತ್ತಿಲ್ಲ. ಸದ್ಯ ಪ್ರಕರಣದ ವಿಚಾರಣೆ ನಡೆಯುತ್ತಿದೆ. ಭಾರ್ಗವ್ ನ ಅಸಲಿ ಮುಖ ಏನು ಎನ್ನುವುದು ತನಿಖೆಯಿಂದ ತಿಳಿದು ಬರಬೇಕಿದೆ.