ರಸ್ತೆ ಬದಿಯ ಗುಂಡಿಗೆ ಬಿದ್ದು ಮರಕ್ಕೆ ಅಪ್ಪಳಿಸಿದ ಕಾರು ಸಾಗಾಟದ ಲಾರಿ | ಚಾಲಕ ಸ್ಥಳದಲ್ಲಿಯೇ ಸಾವು - Mahanayaka

ರಸ್ತೆ ಬದಿಯ ಗುಂಡಿಗೆ ಬಿದ್ದು ಮರಕ್ಕೆ ಅಪ್ಪಳಿಸಿದ ಕಾರು ಸಾಗಾಟದ ಲಾರಿ | ಚಾಲಕ ಸ್ಥಳದಲ್ಲಿಯೇ ಸಾವು

accident
22/04/2021

ಉಪ್ಪಿನಂಗಡಿ: ಕಾರು ಸಾಗಾಟದ ಲಾರಿಯೊಂದು ಚಾಲಕನ ನಿಯಂತ್ರಣ ತಪ್ಪಿ ರಸ್ತೆ ಬದಿಯ ಹೊಂಡಕ್ಕೆ ಬಿದ್ದು, ಮರಕ್ಕೆ ಅಪ್ಪಳಿಸಿದ ಪರಿಣಾಮ ಚಾಲಕ ಸ್ಥಳದಲ್ಲಿಯೇ ಸಾವನ್ನಪ್ಪಿರುವ ಘಟನೆ ಶಿರಾಡಿ ಗ್ರಾಮದ ಕೊಡ್ಡೆಕಲ್ ಎಂಬಲ್ಲಿ ನಡೆದಿದೆ.

ಜಾರ್ಖಂಡ್  ಮೂಲದ 31 ವರ್ಷ ವಯಸ್ಸಿನ ಲಾರಿ ಚಾಲಕ  ನುಸ್ರಲ್ಲಾಖಾನ್ ಮೃತಪಟ್ಟವರಾಗಿದ್ದು, ಕಾರುಗಳನ್ನು ಸಾಗಿಸುವ ಬೃಹತ್ ಲಾರಿ ಅಪಘಾತಕ್ಕೀಡಾಗಿರುವ ಲಾರಿಯಾಗಿದೆ.

ಬೆಂಗಳೂರಿನಿಂದ ಮಂಗಳೂರಿಗೆ ಲಾರಿ ತೆರಳುತ್ತಿತ್ತು. ಶಿರಾಡಿ ಘಾಟ್ ನ ಕೊಟ್ಟೆಕಲ್ ಬಳಿ ರಾತ್ರಿ ಎರಡು ಗಂಟೆಯ ವೇಳೆಗೆ ಈ ಅಪಘಾತ ಸಂಭವಿಸಿದೆ ಎಂದು ತಿಳಿದು ಬಂದಿದೆ.

ಇತ್ತೀಚಿನ ಸುದ್ದಿ