ಆಕ್ಸಿಜನ್ ಸಿಗುತ್ತಿಲ್ಲ ಎಂದಿದ್ದಕ್ಕೆ ಕಪಾಳಕ್ಕೆ ಬಾರಿಸುತ್ತೇನೆ ಎಂದ ಬಿಜೆಪಿ ಸಚಿವ | ಬಿಕ್ಕಿಬಿಕ್ಕಿ ಅತ್ತ ವ್ಯಕ್ತಿ - Mahanayaka

ಆಕ್ಸಿಜನ್ ಸಿಗುತ್ತಿಲ್ಲ ಎಂದಿದ್ದಕ್ಕೆ ಕಪಾಳಕ್ಕೆ ಬಾರಿಸುತ್ತೇನೆ ಎಂದ ಬಿಜೆಪಿ ಸಚಿವ | ಬಿಕ್ಕಿಬಿಕ್ಕಿ ಅತ್ತ ವ್ಯಕ್ತಿ

prahlad patel
23/04/2021

ನವದೆಹಲಿ: ಕೊರೊನಾ ಸೋಂಕು ಪೀಡಿತ ತಾಯಿಗೆ ಆಕ್ಸಿಜನ್ ಒದಗಿಸುವಂತೆ ಕೇಂದ್ರ ಸಚಿವ ಪ್ರಹ್ಲಾದ್ ಪಟೇಲ್ ಗೆ ವ್ಯಕ್ತಿಯೋರ್ವರು ಮನವಿ ಮಾಡಿದ್ದು, ಈ ವೇಳೆ ಮಾನವೀಯತೆ ಮರೆತ ಸಚಿವರು, ಹೀಗೆಲ್ಲ ಮಾತನಾಡಿದರೆ, ಕಪಾಳಕ್ಕೆ ಬಾರಿಸುತ್ತೇನೆ ಎಂದು ಹೇಳಿರುವ ಘಟನೆ ನಡೆದಿದೆ.

ಸಚಿವರ ಮನುವಾದಿ ವರ್ತನೆಯ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಇದರ ಬೆನ್ನಲ್ಲೇ ಸಚಿವರು ಯಾರ ಸಂಪರ್ಕಕ್ಕೆ ಸಿಗದೇ ತಪ್ಪಿಸಿಕೊಂಡಿದ್ದಾರೆ. ನನ್ನ ತಾಯಿ ಕೊರೋನಾ ಸೋಂಕಿನಿಂದ ಬಳಲುತ್ತಿದ್ದು, ಆಕ್ಸಿಜನ್ ಸಿಲಿಂಡರ್ ಅಗತ್ಯವಿದೆ. 36 ಗಂಟೆಗಳ ಬಳಿಕ ಆಕ್ಸಿಜನ್ ನೀಡುವುದಾಗಿ ಆಸ್ಪತ್ರೆಯವರು ಹೇಳಿದ್ದರು. ಆದರೆ, ಇನ್ನೂ ಕೊಟ್ಟಿಲ್ಲ ಎಂದು ಅಳಲು ತೋಡಿಕೊಂಡಿದ್ದಾರೆ.

ನೊಂದ ವ್ಯಕ್ತಿಗೆ ಸಾಂತ್ವಾನ ಹೇಳಬೇಕಿದ್ದ ಸಚಿವರು, ಕೆಂಡಾಮಂಡಲಗೊಂಡು ಮನುವಾದಿಯಂತೆ ವರ್ತಿಸಿದ್ದು, ನಿನ್ನ ಕಪಾಳಕ್ಕೆ ನಾರಿಸುತ್ತೇನೆ ಎಂದು ಹೇಳಿದ್ದಾರೆ. ಈ ವೇಳೆ ವ್ಯಕ್ತಿಯು ಸಚಿವರ ವರ್ತನೆಯಿಂದ ಸ್ಥಳದಲ್ಲಿಯೇ ಬಿಕ್ಕಿ ಬಿಕ್ಕಿ ಅತ್ತಿದ್ದು, ನನ್ನ ತಾಯಿ ಅಲ್ಲಿಯೇ ಮಲಗಿದ್ದಾಳೆ. ಈಗ ನಾವೇನೂ ಮಾಡಬೇಕು ಎಂದು ಆತ ರೋದಿಸಿದ್ದಾನೆ.

ಇನ್ನೂ ಸಚಿವರ ಹೇಳಿಕೆಯನ್ನು ಸಾರ್ವಜನಿಕರು ವಿಡಿಯೋ ಮಾಡಿಕೊಳ್ಳುತ್ತಿದ್ದಾರೆ ಎನ್ನುವುದನ್ನು ಗಮನಿಸಿದ ಸಚಿವ, ತಕ್ಷಣವೇ ಜನರನ್ನು ಸಮಾಧಾನಪಡಿಸಲು ಯತ್ನಿಸಿದ್ದಾರೆ.

ಇತ್ತೀಚಿನ ಸುದ್ದಿ