ನಾವು ನಮ್ಮ ದೇಶಕ್ಕೆ ಮೊದಲ ಆದ್ಯತೆ ನೀಡುತ್ತೇವೆ | ಭಾರತಕ್ಕೆ ಅಮೆರಿಕ ಉತ್ತರ
23/04/2021
ವಾಷಿಂಗ್ಟನ್: ಕೊರೊನಾ ಲಸಿಕೆ ರಫ್ತು ಮೇಲಿನ ನಿರ್ಬಂಧವನ್ನು ತೆರವುಗೊಳಿಸಿವಂತೆ ಭಾರತ ಮಾಡಿರುವ ಮನವಿಯನ್ನು ಅಮೆರಿಕಾ ತಿರಸ್ಕರಿಸಿದ್ದು, ನಾವು ಮೊದಲು ನಮ್ಮ ದೇಶಕ್ಕೆ ಆದ್ಯತೆ ನೀಡುತ್ತೇವೆ ಎಂದು ಹೇಳಿದೆ.
ಕೊರೊನಾದಿಂದ ಅಮೆರಿಕದ ಜನತೆ ತತ್ತರಿಸಿದ್ದಾರೆ ಹಾಗಾಗಿ ನಾವು ಮೊದಲು ಅಮೆರಕದ ಜನರಿಗೆ ಆದ್ಯತೆ ನೀಡಬೇಕು. ಆ ಉದ್ದೇಶದಿಂದ ಈ ನಿರ್ಧಾರವನ್ನು ತೆಗೆದುಕೊಳ್ಳಲಾಗಿದೆ ಎಂದು ಜೋ ಬೈಡೆನ್ ಕಚೇರಿ ಹೇಳಿದೆ.
ಉಳಿದ ರಾಷ್ಟ್ರಗಳಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಭಾರತದಲ್ಲಿ ಕೊರೊನಾ ಹೆಚ್ಚಿದೆ. ಈಗಾಗಲೇ 5.50 ಲಕ್ಷ ಮಂದಿ ಬಲಿಯಾಗಿದ್ದಾರೆ. ಹೀಗಾಗಿ ನಾವು ಭಾರತದ ಬೇಡಿಕೆಯನ್ನು ಇಂತಹ ಸಂದರ್ಭದಲ್ಲಿ ಪುರಸ್ಕರಿಸಲು ಸಾಧ್ಯವಾಗುತ್ತಿಲ್ಲ ಎಂದು ಅವರು ತಮ್ಮ ದೇಶದ ಪ್ರಜೆಗಳ ಸುರಕ್ಷತೆಗೆ ಮೊದಲ ಆದ್ಯತೆ ನೀಡುರುಬುದನ್ನು ಸಮರ್ಥಿಸಿಕೊಂಡಿದ್ದಾರೆ.