ಆಕ್ಸಿಜನ್ ಕೊರತೆ: ಪ್ರಾಣವಾಯು ಇಲ್ಲದೇ 20 ರೋಗಿಗಳ ಸಾವು! - Mahanayaka
3:02 PM Friday 20 - September 2024

ಆಕ್ಸಿಜನ್ ಕೊರತೆ: ಪ್ರಾಣವಾಯು ಇಲ್ಲದೇ 20 ರೋಗಿಗಳ ಸಾವು!

oxygen
24/04/2021

ನವದೆಹಲಿ: ಕೇಂದ್ರ ಸರ್ಕಾರವು ಆಕ್ಸಿಜನ್ ಪೂರೈಸದ ಹಿನ್ನೆಲೆಯಲ್ಲಿ ಕೊವಿಡ್ ರೋಗಿಗಳನ್ನು ಅಕ್ಷರಶಃ ಕಗ್ಗೊಲೆ ಮಾಡಿರುವಂತಹ ಸ್ಥಿತಿಯೇ ನಿರ್ಮಾಣವಾಗಿದ್ದು, ದೆಹಲಿಯ ಜಯಪುರ ಗೋಲ್ಡನ್ ಆಸ್ಪತ್ರೆಯಲ್ಲಿ 20 ರೋಗಿಗಳು ಸಾವನ್ನಪ್ಪಿದ್ದಾರೆ.

ಬತ್ರಾ ಮತ್ತು ಸರ್ ಗಂಗಾರಾಮ್ ಆಸ್ಪತ್ರೆಯಲ್ಲಿ ಆಕ್ಸಿಜನ್ ಎಮರ್ಜೆನ್ಸಿ ಉಂಟಾಗಿದೆ ಎಂದು ಅಲ್ಲಿನ ಅಧಿಕಾರಿ ಹೇಳಿದ್ದಾರೆ. ಇನ್ನೂ 20 ರೋಗಿಗಳು ಆಕ್ಸಿಜನ್ ಇಲ್ಲದೇ ಸಾವನ್ನಪ್ಪಿದ್ದಾರೆ ಎಂದು ಜಯಪುರ ಗೋಲ್ಡನ್ ಆಸ್ಪತ್ರೆಯ ಎಂ.ಡಿ. ಡಾ.ಡಿ.ಕೆ.ಬಲೂಜಾ ಮಾಹಿತಿ ನೀಡಿದ್ದಾರೆ.

ಇನ್ನು ಬತ್ರಾ ಆಸ್ಪತ್ರೆಯಲ್ಲಿ ಸದ್ಯ ಕೇವಲ ಒಂದು ಟ್ಯಾಂಕ್ ಅಕ್ಸಿಜನ್ ಲಭ್ಯವಿದೆ. ಆಸ್ಪತ್ರೆಗೆ 500 ಕೆಜಿ ಆಕ್ಸಿಜನ್ ಟ್ರಕ್ ಮೂಲಕ ತಲುಪಿಸಲಾಗುತ್ತಿದೆ. ಇದು ಆಕ್ಸಿಜನ್ ಸಿಕ್ಕ ನಂತರ 1 ಗಂಟೆಯಷ್ಟೇ ಬರಲಿದೆ. ಸದ್ಯ ಆಸ್ಪತ್ರೆಯಲ್ಲಿ 260 ರೋಗಿಗಳು ಚಿಕಿತ್ಸೆ ಪಡೆಯುತ್ತಿದ್ದಾರೆ. ಹಾಗಾಗಿ ಆಕ್ಸಿಜನ್ ಪೂರೈಕೆ ಪ್ರಮಾಣ ಹೆಚ್ಚಳವಾಗಬೇಕಿದೆ ಎಂದು ಬತ್ರಾ ಆಸ್ಪತ್ರೆಯ ಎಂಡಿ ಡಾ.ಎಸ್.ಸಿ.ಎಲ್.ಗುಪ್ತಾ ಹೇಳಿದ್ದಾರೆ.


Provided by

ಬತ್ರಾ ಆಸ್ಪತ್ರೆಯಲ್ಲಿಯ ಸುಮಾರು 205 ರೋಗಿಗಳಿಗೆ ಆಕ್ಸಿಜನ್ ಅತ್ಯವಶ್ಯಕವಿದೆ, ನಾವು ಸಹ ತಾತ್ಕಾಲಿಕವಾಗಿ ಆಕ್ಸಿಜನ್ ಸಿಲಿಂಡರ್ ಗಳ ವ್ಯವಸ್ಥೆ ಮಾಡಿಕೊಳ್ಳುತ್ತಿದ್ದೇವೆ. ಐಸಿಯುನಲ್ಲಿಯ ರೋಗಿಗಳಿಗೆ ಮೊದಲ ಪ್ರಾಶಸ್ತ್ಯ ನೀಡಲಾಗಿದ್ದು, ನೆರೆಯ ಆಸ್ಪತ್ರೆಗಳು ಸಹಾಯಕ್ಕೆ ಮುಂದಾಗಿವೆ ಎಂದು ಗುಪ್ತಾ ಹೇಳುತ್ತಾರೆ.

ದೇಶಾದ್ಯಂತ ಕೊರೊನಾ ವೈರಸ್ ನಿಂದ ಜನ ತತ್ತರಿಸಿದ್ದಾರೆ. ಇನ್ನೊಂದೆಡೆ ಕೇಂದ್ರ ಸರ್ಕಾರ ಕೊವಿಡ್ ನಿಯಂತ್ರಣಕ್ಕೆ ನಿರಂತರ ವಿಫಲವಾಗುತ್ತಲೇ ಇದೆ. ಇದೀಗ ಆಸ್ಪತ್ರೆಯಲ್ಲಿ ಆಕ್ಸಿಜನ್ ಕೊರತೆ ಉಂಟಾಗಿದ್ದು, ಅಕ್ಷರಶಃ ಜನರ ಕಗ್ಗೊಲೆಯ ಸ್ಥಿತಿ ನಿರ್ಮಾಣವಾಗಿದೆ.

ಇತ್ತೀಚಿನ ಸುದ್ದಿ