ಇಂಡಿಯಾ ಸ್ಟ್ರೇನ್ ಕೊರೊನಾದ ಸ್ವಭಾವ ಬೇರೆಯೇ ಆಗಿದೆ | ಸಚಿವ ಸುಧಾಕರ್ ಹೇಳಿದ್ದೇನು? - Mahanayaka
10:32 AM Thursday 12 - December 2024

ಇಂಡಿಯಾ ಸ್ಟ್ರೇನ್ ಕೊರೊನಾದ ಸ್ವಭಾವ ಬೇರೆಯೇ ಆಗಿದೆ | ಸಚಿವ ಸುಧಾಕರ್ ಹೇಳಿದ್ದೇನು?

indian strain covid
25/04/2021

ಬೆಂಗಳೂರು: ಭಾರತದಲ್ಲಿ ಈಗ ರೂಪಾಂತರಗೊಂಡಿರುವ ಕೊರೊನಾ ಹಿಂದಿನ ಕೊರೊನಾದ ಮಾದರಿಯಲ್ಲ,  ಈ ವೈರಾಣುವಿನ ಸ್ವಭಾವ ಬೇರೆಯೇ ಆಗಿದ್ದು, ಬಹಳ ವೇಗವಾಗಿ ಈ ಕೊರೊನಾ ಹರಡುತ್ತದೆ ಎಂದು ಸಚಿವ ಡಾ.ಸುಧಾಕರ್ ಮಾಹಿತಿ ನೀಡಿದ್ದಾರೆ.

ನಗರದಲ್ಲಿ ಶನಿವಾರ ಮಾಧ್ಯಮಗಳೊಂದಿಗೆ ಮಾತನಾಡಿದ  ಅವರು, ಭಾರತದಲ್ಲಿ ಈಗ ರೂಪಾಂತರಗೊಂಡಿರುವ ಕೊರೊನಾ, ಯುಕೆ ವೈರಸ್,  ಬ್ರೆಜಿಲ್ ಅಥವಾ ಫ್ರಾನ್ಸ್ ವೈರಸ್ ನ ರೀತಿಯಲ್ಲಿ ಇಲ್ಲ. ಈ ಕೊರೊನಾವನ್ನ ಇಂಡಿಯಾ ಸ್ಟ್ರೇನ್ ಎಂದು ಕರೆಯುತ್ತಾರೆ ಎಂದು ಸುಧಾಕರ್ ತಿಳಿಸಿದ್ದಾರೆ.

ಈ ಹಿಂದೆ ಸ್ಪಾನಿಷ್ ಕೊರೊನಾ ಕಾಣಿಸಿಕೊಂಡಿತ್ತು. ಆಗ ಇದಕ್ಕಿಂತ ಹೆಚ್ಚು ಸಾವು ಕಾಣಿಸಿಕೊಂಡಿತ್ತು.  ಆದರೆ ಈ ಬಾರಿ ಸಾವಿನ ಪ್ರಮಾಣ ಅಷ್ಟಿಲ್ಲ. ಕೊರೊನಾ ಹೆಚ್ಚಾಗಿ ಪತ್ತೆಯಾಗುತ್ತಿರುವುದರಿಂದ ಜನರು ಆತಂಕದಲ್ಲಿದ್ದಾರೆ ಎಂದು ಸುಧಾಕರ್ ಅಭಿಪ್ರಾಯಪಟ್ಟರು.

ಇತ್ತೀಚಿನ ಸುದ್ದಿ