ನೀರು ತುಂಬಿದ್ದ ಬಕೆಟ್ ಗೆ ಬಿದ್ದು 10 ತಿಂಗಳ ಮಗುವಿನ ದಾರುಣ ಸಾವು
ದಾವಣಗೆರೆ: ನೀರು ತುಂಬಿಸಿಟ್ಟಿದ್ದ ಬಕೆಟ್ ಗೆ ಬಿದ್ದು 10 ತಿಂಗಳ ಮಗು ಸಾವನ್ನಪ್ಪಿದ ಘಟನೆ ದಾವಣಗೆರೆ ಜಿಲ್ಲೆಯ ಜಗಳೂರು ತಾಲೂಕಿನ ಬಿಸ್ತುವಳ್ಳಿ ಗ್ರಾಮದಲ್ಲಿ ನಡೆದಿದೆ.
ಅನುಶ್ರಾವ್ಯ(10 ತಿಂಗಳು) ಮೃತಪಟ್ಟ ಮಗುವಾಗಿದ್ದು, ಮನೆಯ ಮುಂಭಾಗದಲ್ಲಿ ಮಗು ಎಂದಿನಂತೆಯೇ ಆಟವಾಡುತ್ತಿತ್ತು. ಈ ವೇಳೆ ನೀರು ತುಂಬಿದ ಬಕೆಟ್ ಗೆ ಮಗು ಬಿದ್ದಿದ್ದು, ಮಗುವಿನ ಪೋಷಕರು ಇದನ್ನು ತಡವಾಗಿ ಗಮನಿಸಿದ್ದಾರೆ ಎನ್ನಲಾಗಿದೆ.
ಮಗು ಬಕೆಟ್ ಗೆ ಬಿದ್ದಿರುವುದನ್ನು ಕಂಡ ತಕ್ಷಣವೇ ಮಗುವನ್ನು ಜಗಳೂರಿನ ಆಸ್ಪತ್ರೆಗೆ ಸಾಗಿಸಲಾಗಿದ್ದು, ಆದರೆ, ಮಾರ್ಗ ಮಧ್ಯೆ ಮಗು ಕೊನೆಯುಸಿರೆಳೆದಿದೆ ಎಂದು ತಿಳಿದು ಬಂದಿದೆ.
ಗ್ರಾಮದ ಮಂಜುನಾಥ್ ಹಾಗೂ ತಾರಾ ದಂಪತಿಯ ಮಗುವಾಗಿರುವ ಅನುಶ್ರಾವ್ಯ ಮೃತಪಟ್ಟ ಮಗುವಾಗಿದ್ದು, ಇದೀಗ ಮಗುವನ್ನು ಕಳೆದುಕೊಂಡ ಕುಟುಂಬಸ್ಥರ ರೋದನೆ ಮುಗಿಲು ಮುಟ್ಟಿದೆ.
ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/LwWxa0YtfZe3V04Rgx7ZIV
ಯೂಟ್ಯೂಬ್ ಚಾನೆಲ್ ಸಬ್ಸ್’ಕ್ರೈಬ್ ಮಾಡಿ: https://www.youtube.com/channel/UCTTKjhIcEgYKLMGVKaXU3-w
ಡೈಲಿ ಹಂಟ್ ನಲ್ಲಿ ಫಾಲೋ ಮಾಡಿ: https://profile.dailyhunt.in/mahanayaka