ರಸ್ತೆ ಬದಿಯಲ್ಲಿ 15 ಅಡಿ ಉದ್ದದ ಹೆಬ್ಬಾವು ಪತ್ತೆ: ಬೇಟೆಗಾಗಿ ಕಾದುಕುಳಿತಿದ್ದ ಹೆಬ್ಬಾವು
ಮಂಗಳೂರು–ವಿಲ್ಲುಪುರಂ ರಾಷ್ಟ್ರೀಯ ಹೆದ್ದಾರಿಯ ಮುಂಡಾಜೆ ರಕ್ಷಿತಾರಣ್ಯ ಪ್ರದೇಶದ ಸೀಟು ಎಂಬಲ್ಲಿ ರಸ್ತೆ ಬದಿ, ಸುಮಾರು 15 ಅಡಿ ಉದ್ದದ ಹೆಬ್ಬಾವು ಕಂಡುಬಂದಿದೆ.
ರಸ್ತೆಯ ತೀರಾಬದಿಯಲ್ಲಿದ್ದ ಹೆಬ್ಬಾವಿನಿಂದ ವಾಹನ ಸವಾರರು ಹಾಗೂ ಸೀಟು ತಂಗುದಾಣ ದಲ್ಲಿ ವಾಹನ ನಿರೀಕ್ಷಿಸುವ ವಿದ್ಯಾರ್ಥಿಗಳು ಹಾಗೂ ಸಾರ್ವಜನಿಕರು ಭೀತಿ ಪಟ್ಟರು.
ಸೋಮವಾರ ಬೆಳಿಗ್ಗೆ 8ರ ಸುಮಾರಿಗೆ ಇಲ್ಲಿ ಹೆಬ್ಬಾವು ಇರುವುದನ್ನು ಸ್ಥಳೀಯರು ಗಮನಿಸಿ ಈ ಬಗ್ಗೆ ಅರಣ್ಯ ಇಲಾಖೆಗೆ ಮಾಹಿತಿ ನೀಡಿದರು. ಬೇಟೆಯ ನಿರೀಕ್ಷೆಯಲ್ಲಿ ಮಡಚಿ ಕುಳಿತಿದ್ದ ಹೆಬ್ಬಾವು ಇಲಾಖೆ ಸಿಬ್ಬಂದಿ ಉರಗಮಿತ್ರರೊಡನೆ ಆಗಮಿಸುವ ವೇಳೆಗೆ ಸ್ಥಳದಿಂದ ಹೋಗಿತ್ತು. ಸುತ್ತಲ ಪರಿಸರದಲ್ಲಿ ಹುಡುಕಾಟ ನಡೆಸಿದರು ಹೆಬ್ಬಾವು ಪತ್ತೆಯಾಗದೆ ಬರಿಗೈಯಲ್ಲಿ ಹಿಂದಿರುಗಬೇಕಾಯಿತು.
ಸ್ಥಳೀಯರು ಹೇಳುವ ಪ್ರಕಾರ ಕಳೆದ ಎರಡು ಮೂರು ದಿನಗಳಿಂದ ಸೀಟು ಪರಿಸರದ ಅಲ್ಲಲ್ಲಿ ಹೆಬ್ಬಾವು ಕಂಡು ಬರುತ್ತಿದೆ. ರಾಷ್ಟ್ರೀಯ ಹೆದ್ದಾರಿ ಅಭಿವೃದ್ಧಿಯ ಸಮೀಕ್ಷೆಗಳನ್ನು ನಡೆಸುವವರು ಪಾದಚಾರಿಗಳು, ವಿದ್ಯಾರ್ಥಿಗಳು, ಸಾರ್ವಜನಿಕರು ವಾಹನ ಸವಾರರು ಸೊಪ್ಪು,ಕಟ್ಟಿಗೆ ಸಂಗ್ರಹಿಸಲು ಕಾಡಿಗೆ ಹೋಗುವ ಮಂದಿ ಹೆಚ್ಚಿನ ಮುಂಜಾಗ್ರತೆಯಿಂದ ಸಂಚಾರ ನಡೆಸುವಂತೆ ಅರಣ್ಯ ಇಲಾಖೆ ಸೂಚನೆ ನೀಡಿದೆ.ಈ ಹೆಬ್ಬಾವನ್ನು ಅನ್ಯಸ್ಥಳದಿಂದ ಈ ಪ್ರದೇಶಕ್ಕೆ ತಂದು ಬಿಟ್ಟಿರುವ ಶಂಕೆಯು ವ್ಯಕ್ತವಾಗಿದೆ.
ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/H1J7NYrbnAi7fQ7rqJsLYg
ಯೂಟ್ಯೂಬ್ ಚಾನೆಲ್ ಸಬ್ಸ್’ಕ್ರೈಬ್ ಮಾಡಿ: https://www.youtube.com/channel/UCTTKjhIcEgYKLMGVKaXU3-w
ಗೂಗಲ್ ನ್ಯೂಸ್ ನಲ್ಲಿ ಫಾಲೋ ಮಾಡಿ: https://news.google.com/publications/CAAqBwgKMICOwgswoqnZAw