ನೀರೆಂದು ಪೈಂಟ್ ಥಿನ್ನರ್ ಕುಡಿದು 2 ವರ್ಷದ ಬಾಲಕ ಸಾವು!
13/02/2024
ಗುರುಗ್ರಾಮ್: ಪೈಂಟ್ ಥಿನ್ನರ್ ಕುಡಿದು ಎರಡು ವರ್ಷದ ಬಾಲಕ ದಾರುಣ ಸಾವನ್ನಪ್ಪಿದ ಘಟನೆ ಗುರುಗ್ರಾಮ್ ನ ಸೋಹ್ನಾದಲ್ಲಿ ನಡೆದಿದೆ. ಮೃತ ಬಾಲಕನ್ನು ಹರ್ಯಾಣ ಹಟಿನ್ ನ ಹಕ್ಷನ (2)ಎಂದು ಗುರುತಿಸಲಾಗಿದೆ.
ಬಾಲಕನ ಪೋಷಕರು ಸಂಬಂಧಿಯೊಬ್ಬರು ಮದುವೆ ಸಮಾರಂಭದಲ್ಲಿ ಪಾಲ್ಗೊಳ್ಳಲು ಸೋಹ್ನಾ ಗ್ರಾಮಕ್ಕೆ ತೆರಳಿದ್ದು, ಸಂಬಂಧಿಯ ಮನೆಯಲ್ಲಿ ಪೈಂಟಿಂಗ್ ಕೆಲಸಕ್ಕೆ ಬಣ್ಣ ಬೆರೆಸಲು ಬಳಸುತ್ತಿದ್ದ ಥಿನ್ನರ್ ಅನ್ನು ಕುಡಿಯುವ ನೀರೆಂದು ಭಾವಿಸಿ ಬಾಲಕ ಕುಡಿದಿದ್ದಾನೆ.
ನಂತರ ಬಾಲಕ ಅಸ್ವಸ್ಥಗೊಂಡಿದ್ದು, ಕೂಡಲೇ ಹತ್ತಿರದ ಸರ್ಕಾರಿ ಆಸ್ಪತ್ರೆಗೆ ಕರೆದೊಯ್ದರು, ಆದಾಗಲೇ ಮಗು ಮೃತಪಟ್ಟಿರುವುದಾಗಿ ವೈದ್ಯರು ತಿಳಿಸಿದ್ದಾರೆ.