ಜಮೀನಿನಲ್ಲಿ ಕುಳಿತಿದ್ದ 7 ವರ್ಷದ ಬಾಲಕ ಹುಲಿಯ ದಾಳಿಗೆ ಬಲಿ! - Mahanayaka
6:12 PM Thursday 12 - December 2024

ಜಮೀನಿನಲ್ಲಿ ಕುಳಿತಿದ್ದ 7 ವರ್ಷದ ಬಾಲಕ ಹುಲಿಯ ದಾಳಿಗೆ ಬಲಿ!

charan
04/09/2023

ಮೈಸೂರು:  ಹುಲಿ ದಾಳಿಗೆ 7 ವರ್ಷದ ಬಾಲಕ ಬಲಿಯಾಗಿರುವ ಘಟನೆ ಮೈಸೂರು ಜಿಲ್ಲೆಯ ಹೆಚ್.ಡಿ.ಕೋಟೆ ತಾಲೂಕಿನ ಸಿದ್ಧಾಪುರ ಬಳಿಯ ಕಲ್ಲಹಟ್ಟಿಯಲ್ಲಿ ನಡೆದಿದೆ.

ಇಲ್ಲಿನ ಕಲ್ಲಹಟ್ಟಿ ಗ್ರಾಮದ ಚರಣ್(7) ಮೃತಪಟ್ಟ ಬಾಲಕನಾಗಿದ್ದಾನೆ. ಜಮೀನಿನ ಮರದ ಕೆಳಗೆ ಕುಳಿತಿದ್ದ ಬಾಲಕನ ಮೇಲೆ ಹಾಡಹಗಲೇ ಹುಲಿ ದಾಳಿ ನಡೆಸಿದ್ದು, ಬಾಲಕನ ದೇಹವನ್ನು ಹುಲಿ ತಿಂದು ಹಾಕಿದೆ.

ಬಾಲಕ ಚರಣ್ ಪೋಷಕರೊಂದಿಗೆ ಜಮೀನಿಗೆ ತೆರಳಿದ್ದ. ಮರದ ಕೆಳಗೆ ಕುಳಿತಿದ್ದ ಚರಣ್ ಕಣ್ಮರೆಯಾಗಿರುವುದು ಕಂಡು ಬಾಲಕನ ಪೋಷಕರು ಹುಡುಕಾಡಿದ್ದಾರೆ. ಈ ವೇಳೆ ಬಾಲಕ ಇದ್ದ ಪ್ರದೇಶದಿಂದ ಸ್ವಲ್ಪದೂರದಲ್ಲೇ ಹುಲಿ ತಿಂದ ಸ್ಥಿತಿಯಲ್ಲಿ ಬಾಲಕನ ಮೃತದೇಹ ಪತ್ತೆಯಾಗಿದೆ.

ಇಷ್ಟೊಂದು ಗಂಭೀರ ಘಟನೆ ನಡೆದಿದ್ದರೂ, ಅರಣ್ಯ ಇಲಾಖೆ ಸಿಬ್ಬಂದಿ ಸ್ಥಳಕ್ಕೆ ಬಾರದ ಹಿನ್ನೆಲೆಯಲ್ಲಿ ಗ್ರಾಮಸ್ಥರು ತೀವ್ರ ಆಕ್ರೋಶ ವ್ಯಕ್ತಪಡಿಸಿದರು.

ಇತ್ತೀಚಿನ ಸುದ್ದಿ