ಕಾಬುಲ್ ನ ಅಮ್ಯೂಸ್ಮೆಂಟ್ ಪಾರ್ಕ್ ಗೆ ನುಗ್ಗಿ ಮಕ್ಕಳ ಆಟಿಕೆ ಕಾರಿನಲ್ಲಿ ಆಟವಾಡಿದ ಉಗ್ರರು - Mahanayaka
3:21 PM Wednesday 5 - February 2025

ಕಾಬುಲ್ ನ ಅಮ್ಯೂಸ್ಮೆಂಟ್ ಪಾರ್ಕ್ ಗೆ ನುಗ್ಗಿ ಮಕ್ಕಳ ಆಟಿಕೆ ಕಾರಿನಲ್ಲಿ ಆಟವಾಡಿದ ಉಗ್ರರು

amusement park kabul
17/08/2021

ಕಾಬುಲ್: ಅಫ್ಘಾನಿಸ್ತಾನವನ್ನು ವಶಪಡಿಸಿಕೊಂಡ ಬಳಿಕ ತಾಲಿಬಾನ್ ಉಗ್ರರು ಕಾಬುಲ್ ನ ಅಮ್ಯೂಸ್ಮೆಂಟ್ ಪಾರ್ಕ್ ವೊಂದಕ್ಕೆ ನುಗ್ಗಿ ಮಕ್ಕಳ ಆಟಿಕೆ ಕಾರುಗಳಲ್ಲಿ ಆಟವಾಡುತ್ತಿರುವ ದೃಶ್ಯ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ತಮ್ಮ ವಿಜಯಕ್ಕೆ ಸಂಭ್ರಮಿಸಿದ್ದಾರೆ.

 

ವಿಶ್ವದ ಪ್ರಮುಖ ಸುದ್ದಿ ಸಂಸ್ಥೆ ರಾಯಿಟರ್ಸ್ ನ ಹಿರಿಯ ವರದಿಗಾರ ಹಮೀದ್ ಶಾಲಿಜಿ ಅವರು ಈ ವಿಡಿಯೋವನ್ನು ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಕೈಯಲ್ಲಿ ಆಯುಧಗಳನ್ನು ಹಿಡಿದುಕೊಂಡು ಮಕ್ಕಳ ಆಟಿಕೆ ಕಾರಿನಲ್ಲಿ ಕುಳಿತುಕೊಂಡು ಒಬ್ಬರಿಗೊಬ್ಬರು ಕಾರನ್ನು ಡಿಕ್ಕಿ ಹೊಡೆಸುತ್ತಾ ಆಟವಾಡಿದ್ದಾರೆ.

 

ಇನ್ನೊಂದು ವಿಡಿಯೋದಲ್ಲಿ ಉಗ್ರರು ಅಫ್ಘಾನ್ ಅಧ್ಯಕ್ಷರ ಅರಮನೆಗೆ ನುಗ್ಗಿ ಅಲ್ಲಿದ್ದ ಜಿಮ್ ನಲ್ಲಿ ಬೇಕಾಬಿಟ್ಟಿ ವ್ಯಾಯಾಮ ಮಾಡುತ್ತಿರುವ ದೃಶ್ಯಗಳು ಕಂಡು ಬಂದಿದೆ. ಉಗ್ರರು ಪಾರ್ಕ್ ನ ಆಟದ ಕುದುರೆಗಳ ಮೇಲೆ ಕುಳಿತುಕೊಂಡಿರುವುದು ಕಂಡು ಬಂದಿದೆ.

 

ಇನ್ನಷ್ಟು ಸುದ್ದಿಗಳು…

ತಾಲಿಬಾನ್ ಉಗ್ರರ ಕೈಸೇರಿತು ಅಮೆರಿಕದ ಆಧುನಿಕ ಯುದ್ಧೋಪಕರಣಗಳು | ವಿಶ್ವಕ್ಕೆ ಸವಾಲು ಹಾಕುತ್ತಾರಾ ಉಗ್ರರು?

ಬುರ್ಖಾ ಧರಿಸದೇ ಓಡಾಡುತ್ತಿದ್ದ ಮಹಿಳೆಯರನ್ನು ಸುಟ್ಟುಕೊಂದ ತಾಲಿಬಾನಿಗಳು!

4 ಕಾರು, 1 ಹೆಲಿಕಾಫ್ಟರ್ ನಲ್ಲಿ ಹಣ ತುಂಬಿಸಿಕೊಂಡು ಅಫ್ಘಾನ್ ಅಧ್ಯಕ್ಷ ಅಶ್ರಫ್ ಘನಿ ಪರಾರಿ

ಉಗ್ರರ ಅಟ್ಟಹಾಸಕ್ಕೆ  ನಲುಗಿದ ಅಫ್ಘಾನಿಸ್ತಾನ | ಪ್ರಾಣ ಉಳಿಸಿಕೊಳ್ಳಲು ವಿಮಾನದ ಟಯರ್ ಏರಿದವರ ದುರಂತ ಅಂತ್ಯ

ಸವರ್ಣೀಯರಿಂದ ಶೋಷಿತರಿಗೆ ಇನ್ನೂ ಸ್ವಾತಂತ್ರ್ಯ ದೊರೆತಿಲ್ಲ | ಅಂಬೇಡ್ಕರ್ ಸೇನೆ

ಇತ್ತೀಚಿನ ಸುದ್ದಿ