ಬೆಂಗಳೂರಿನಲ್ಲೇ ತಯಾರಾಗಲಿದೆ ಚಾಲಕ ರಹಿತ ಮೆಟ್ರೋ ರೈಲು! - Mahanayaka
8:06 AM Tuesday 17 - September 2024

ಬೆಂಗಳೂರಿನಲ್ಲೇ ತಯಾರಾಗಲಿದೆ ಚಾಲಕ ರಹಿತ ಮೆಟ್ರೋ ರೈಲು!

driverless metro
09/09/2024

ಬೆಂಗಳೂರು: ಚಾಲಕ ರಹಿತ ಮೆಟ್ರೋ ರೈಲುಗಳನ್ನು ಕೇಂದ್ರ ಸರ್ಕಾರ, ಬೆಂಗಳೂರಿನ ಬೆಮಲ್​ನಲ್ಲಿ ತಯಾರು ಮಾಡಿಸುತ್ತಿದ್ದು, ಈಗಾಗಲೇ ಈ ಒಪ್ಪಂದಕ್ಕೆ ಬಿಎಂಆರ್​​ಸಿಎಲ್ ಮತ್ತು ಬೆಮಲ್ ಮುಖ್ಯಸ್ಥರು ಸಹಿ ಮಾಡಿದ್ದಾರೆ.

ಈ ಡ್ರೈವರ್ ಲೆಸ್ ಮೆಟ್ರೋ ರೈಲುಗಳು ಪಿಂಕ್ ಮತ್ತು ಬ್ಲೂಲೈನ್ ನಲ್ಲಿ ಟ್ರ್ಯಾಕ್ ಗಿಳಿಯಲು ಚಿಂತನೆ ನಡೆಸಲಾಗಿದೆ. 3177 ಕೋಟಿ ರೂಪಾಯಿ ವೆಚ್ಚದಲ್ಲಿ ಮೇಕ್ ಇನ್ ಇಂಡಿಯಾ ಅಡಿಯಲ್ಲಿ ಈ ವಿಶೇಷ ರೈಲು ತಯಾರಾಗಲಿದೆಯಂತೆ.

53 ಟ್ರೈನ್ ಸೆಟ್​ ಗಳು ಸೇರಿದಂತೆ 318 ಕೋಚ್​ ಗಳನ್ನು ಬೆಮಲ್ ತಯಾರು ಮಾಡಲಿದೆ. ಕಾಳೇನ ಅಗ್ರಹಾರದಿಂದ ನಾಗವಾರ ( ಪಿಂಕ್‌ ಲೈನ್ ) 21 ಕಿಮೀ ಹಾಗೂ ಸಿಲ್ಕ್ ಬೋರ್ಡ್​​ನಿಂದ ವಿಮಾನ ನಿಲ್ದಾಣ (ಬ್ಲೂ ಲೈನ್) 55 ಕಿ.ಮೀ ಎರಡು ಮಾರ್ಗದಲ್ಲೂ ಡ್ರೈವರ್ ಲೆಸ್ ಮೆಟ್ರೋ ರೈಲುಗಳು ಸಂಚಾರ ಮಾಡಲಿದೆಯಂತೆ.


Provided by

ಈಗಾಗಲೇ ಆರ್​​.ವಿ.ರಸ್ತೆಯಿಂದ ಬೊಮ್ಮಸಂದ್ರ (ಹಳದಿ ಮಾರ್ಗಕ್ಕೆ) ಚೀನಾದಿಂದ ಡ್ರೈವರ್ ಲೆಸ್ ರೈಲುಗಳನ್ನು ತರಿಸಿಕೊಳ್ಳಲಾಗಿದೆ. ಆದರೆ ಚೀನಾದಿಂದ ರೈಲು ಬರಲು ಸಾಗಾಟ ವಿಳಂಬ ಸಮಸ್ಯೆ ಕಂಡು ಬಂದಿತ್ತು. ಹೀಗಾಗಿ ಪಿಂಕ್ ಮತ್ತು ಬ್ಲೂ ಲೈನ್ ಮಾರ್ಗಕ್ಕೆ‌ ಮೆಟ್ರೋ ಕೋಚ್​ಗಳು ವಿಳಂಬವಾಗಬಾರದು ಎಂದು ಬೆಂಗಳೂರಿನ ಬೆಮಲ್ ​​ನೊಂದಿಗೆ ಒಪ್ಪಂದ ಮಾಡಿಕೊಳ್ಳಲಾಗಿದೆ. ಬೆಂಗಳೂರಿನಲ್ಲಿ ಡ್ರೈವರ್ ಲೆಸ್ ರೈಲು ತಯಾರಾಗುತ್ತಿರುವುದು ಕನ್ನಡಿಗರಿಗೆ ಹೆಮ್ಮೆಯಾಗಿದೆ.


ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8088059494 ನಂಬರ್ ಸೇರಿಸಿ.

ಗ್ರೂಪ್ ಗೆ ಜಾಯಿನ್ ಆಗಿ:

https://chat.whatsapp.com/BHOOdLNNvmD17cBJslQgwj

ಇತ್ತೀಚಿನ ಸುದ್ದಿ