ಪಂಜಾಬ್ ನಿಂದ ದೆಹಲಿಗೆ ಹಿಮ್ಮುಖವಾಗಿ 375 ಕಿ.ಮೀ. ದೂರ ಟ್ರ್ಯಾಕ್ಟರ್ ಚಲಾಯಿಸಿದ ರೈತ!
26/01/2021
ದೆಹಲಿ: ಕೇಂದ್ರ ಸರ್ಕಾರದ ಕೃಷಿ ಕಾನೂನುಗಳ ವಿರುದ್ಧ ರೈತರು ಇಂದು ಟ್ರ್ಯಾಕ್ಟರ್ ಪರೇಡ್ ನಡೆಸುತ್ತಿದ್ದಾರೆ. ಇದೇ ಸಂದರ್ಭದಲ್ಲಿ ರೈತರೊಬ್ಬರು ಬರೋಬ್ಬರಿ 375 ಕಿ.ಮೀ. ದೂರ ಟ್ರಾಕ್ಟರ್ ನ್ನು ರಿವರ್ಸ್ ಗೇರ್ ಮೂಲಕ ಚಲಾಯಿಸಿ ವಿನೂತನವಾಗಿ ಪ್ರತಿಟನೆ ನಡೆಸಿದ್ದಾರೆ.
ತಾನು ಹಿಮ್ಮುಖವಾಗಿ ಟ್ರ್ಯಾಕ್ಟರ್ ಚಲಾಯಿಸಿದಂತೆಯೇ ಕೇಂದ್ರ ಸರ್ಕಾರ ಕೃಷಿ ಕಾನೂನನ್ನು ಹಿಂದೆಗೆದುಕೊಳ್ಳಬೇಕು ಎನ್ನುವ ಸಂದೇಶವನ್ನು ನೀಡಿರುವುದಾಗಿ ರೈತ ಯುವಕ ಹೇಳಿದ್ದಾರೆ.
ಈ ವಿಡಿಯೋ ಟ್ವಿಟ್ಟರ್ ನಲ್ಲಿ ಇದೀಗ ವೈರಲ್ ಆಗಿದೆ. ಪಂಜಾಬ್ ನಿಂದ ದೆಹಲಿಯವರೆಗೆ ರೈತ ಹಿಮ್ಮುಖವಾಗಿ ಟ್ರ್ಯಾಕ್ಟರ್ ನ್ನು ಚಲಾಯಿಸಿದ್ದಾರೆ. ಕೃಷಿ ಕಾಯ್ದೆ ವಿರುದ್ಧ ನಡೆಸಿದ ಈ ವಿನೂತನ ಪ್ರತಿಭಟನೆ ಇದೀಗ ಮೆಚ್ಚಗೆಗೆ ಪಾತ್ರವಾಗಿದೆ. ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ.
https://twitter.com/Tractor2twitr/status/1353170680620212225?s=20