ಸಾಲ ಬಾಧೆ ತಾಳಲಾರದೇ ರೈತ ಮಹಿಳೆ ಸಾವಿಗೆ ಶರಣು
05/10/2023
ಚಿಕ್ಕಮಗಳೂರು: ಸಾಲಬಾಧೆ ತಾಳಲಾರದೆ ರೈತ ಮಹಿಳೆಯೊಬ್ಬರು ಆತ್ಮಹತ್ಯೆಗೆ ಶರಣಾಗಿರುವ ಘಟನೆ ಕಡೂರು ತಾಲೂಕಿನ ರಂಗೇನಹಳ್ಳಿ ಗ್ರಾಮದಲ್ಲಿ ಘ ನಡೆದಿದೆ.
ಮಳೆ ಕೈಕೊಟ್ಟ ಹಿನ್ನೆಲೆ ಬೆಳೆ ನಾಶದಿಂದ ಮನನೊಂದ ರೈತ ಮಹಿಳೆ ಕೆರೆಗೆ ಹಾರಿ ಆತ್ಮಹತ್ಯೆಗೆ ಶರಣಾಗಿದ್ದಾರೆ. 75 ವರ್ಷದ ಹನುಮಮ್ಮ ಮೃತಪಟ್ಟವರಾಗಿದ್ದಾರೆ.
ಮೂರುವರೆ ಎಕರೆಯಲ್ಲಿ ಜೋಳ-ರಾಗಿ ಬೆಳೆದಿದ್ದ ಈ ಮಹಿಳೆ ಕೆನರಾ ಬ್ಯಾಂಕ್ ನಲ್ಲಿ 6 ಲಕ್ಷ ಸಾಲ ಮಾಡಿದ್ದರು. ಮಳೆ ಕೈಕೊಟ್ಟ ಹಿನ್ನೆಲೆ ಬೆಳೆ ನಷ್ಟವಾಗಿದ್ದು, ಸಾಲ ತೀರಿಸುವುದು ಹೇಗೆ ಎಂಬ ಚಿಂತೆಯಿಂದ ಮನನೊಂದು ಆತ್ಮಹತ್ಯೆ ಮಾಡಿಕೊಂಡಿದ್ದಾರೆನ್ನಲಾಗಿದೆ. ಘಟನೆ ಸಂಬಂಧ ಕಡೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.