11:24 AM Wednesday 12 - March 2025

ಪಲ್ಗುಣಿ ಶ್ರೀ ಕಾಲನಾಥೇಶ್ವರ ಸ್ವಾಮಿಯ ಬ್ರಹ್ಮರಥಕ್ಕೆ ಕೊಟ್ಟಿಗೆಹಾರದಲ್ಲಿ ಅದ್ದೂರಿ ಸ್ವಾಗತ

brahmaratha
11/03/2025

ಕೊಟ್ಟಿಗೆಹಾರ: ಮೂಡಿಗೆರೆ ತಾಲ್ಲೂಕಿನ ಪಲ್ಗುಣಿ ಶ್ರೀ ಕಾಲನಾಥೇಶ್ವರ ಸ್ವಾಮಿ ದೇವಾಲಯಕ್ಕೆ ಅರ್ಪಣೆ ಆಗಲಿರುವ ಶ್ರೀ ಬ್ರಹ್ಮರಥವು ಇಂದು ಮಂಗಳವಾರ ಮುಂಜಾನೆ ಉಡುಪಿ ಜಿಲ್ಲೆಯ ಕೋಟೇಶ್ವರದ ಕುಂಬಾಸಿಯಿಂದ ವೈಭವದಿಂದ ಹೊರಟು, ಸಂಜೆ 5 ಗಂಟೆಗೆ ಕೊಟ್ಟಿಗೆಹಾರ ತಲುಪಿತು.

ಗ್ರಾಮಸ್ಥರು ಹಾಗೂ ಭಕ್ತಾದಿಗಳು ಭಕ್ತಿಪೂರ್ಣ ವಾತಾವರಣದಲ್ಲಿ ರಥವನ್ನು ಸ್ವಾಗತಿಸಿದರು. ಕೊಟ್ಟಿಗೆಹಾರದಿಂದ ಪಲ್ಗುಣಿ ದೇವಸ್ಥಾನದವರೆಗೆ ವಿಜೃಂಭಣೆಯಿಂದ ಮೆರವಣಿಗೆ ನಡೆಸಲಾಯಿತು. ಭಜನೆಗೋಷ್ಠಿ, ಮಂಗಳವಾದ್ಯ, ಹೂವಿನ ಅಲಂಕಾರ ಹಾಗೂ ದೀಪಾರಾಧನೆ ನಡುವೆ ರಥವನ್ನು ದೇವಸ್ಥಾನಕ್ಕೆ ಸಮರ್ಪಿಸಲಾಯಿತು.

ಈ ಮಹೋತ್ಸವದಲ್ಲಿ ದೇವಸ್ಥಾನ ಸಮಿತಿಯ ಅಧ್ಯಕ್ಷ ಸಬ್ಬೆನಹಳ್ಳಿ ಸುಧೀರ್ ಗೌಡರ ನೇತೃತ್ವದಲ್ಲಿ ಸಮಿತಿ ಸದಸ್ಯರು, ಊರಿನ ಗ್ರಾಮಸ್ಥರು, ಅಕ್ಕಪಕ್ಕದ ಊರಿನ ಭಕ್ತಾದಿಗಳು ಸೇರಿದಂತೆ ಸಾವಿರಾರು ಮಂದಿ ಭಕ್ತರು ಪಾಲ್ಗೊಂಡು ಸಂಭ್ರಮಿಸಿದರು.

ಗ್ರಾಮದಲ್ಲಿ ಆಧ್ಯಾತ್ಮಿಕತೆಯ ಪರಿಮಳ ಮೂಡಿಸಿದ್ದ ಈ ವೈಭವದ ಕ್ಷಣ ಭಕ್ತಾದಿಗಳಿಗೆ ಅನನ್ಯ ಅನುಭವ ನೀಡಿತು.


ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 9686399493ನಂಬರ್ ಸೇರಿಸಿ.

ಗ್ರೂಪ್ ಗೆ ಜಾಯಿನ್ ಆಗಿ:

https://chat.whatsapp.com/BR3b3qhWZWaCzpD1m6N5uu

ಇತ್ತೀಚಿನ ಸುದ್ದಿ

Exit mobile version