ಕಾರಿನಲ್ಲಿ ತೆರಳುತ್ತಿದ್ದ ಯುವತಿಯನ್ನು ತಡೆದ ಪುಂಡರ ತಂಡ: ಬೈಕ್‌ ಮೇಲೆ ಕಾರು ಚಲಾಯಿಸಿದ ಯುವತಿ

bangalore
09/01/2024

ಬೆಂಗಳೂರು: ಕಾರಿನಲ್ಲಿ ತೆರಳುತ್ತಿದ್ದ ಯುವತಿಯನ್ನು ಅಡ್ಡಗಟ್ಟಿದ ಯುವಕರ ತಂಡವೊಂದು ಪುಂಡಾಟ ಮೆರೆದಿರುವ ಆರೋಪ ಕೇಳಿ ಬಂದಿದ್ದು,  ಯುವಕರು ಕಾರನ್ನು ತಡೆದು ಗಲಾಟೆ ಮಾಡುತ್ತಿರುವ ದೃಶ್ಯಾವಳಿ ಸೆರೆಯಾಗಿದೆ.

ವರದಿಗಳ ಪ್ರಕಾರ, ಓವರ್‌ ಟೇಕ್‌ ಮಾಡಲು ಮುಂದಾದಾಗ ಕಾರಿಗೆ ಯುವಕರು ಅಡ್ಡ ನಿಂತಿದ್ದಾರೆ. ಬಳಿಕ ಕಾರಿನಲ್ಲಿದ್ದವರ ಜೊತೆಗೆ ಗಲಾಟೆಗೆ ನಿಂತಿದ್ದಾರೆ. ಕಾರಿಗೆ ಡ್ಯಾಮೇಜ್‌ ಮಾಡಲೂ ಮುಂದಾಗಿದ್ದಾರೆ. ಈ ವೇಳೆ ಯುವತಿ ಬೈಕ್‌ ಮೇಲೆ ಕಾರು ಹತ್ತಿಸಿ, ಯುವಕರಿಂದ ತಪ್ಪಿಸಿಕೊಂಡಿದ್ದಾರೆ. ಬಳಿಕ ಪೊಲೀಸರಿಗೆ ಕರೆ ಮಾಡಿದ್ದಾರೆ.

ಘಟನೆಯ ದೃಶ್ಯವು ಡ್ಯಾಶ್‌ ಕ್ಯಾಮರಾದಲ್ಲಿ ಸೆರೆಯಾಗಿದೆ. ಬೆಂಗಳೂರಿನಲ್ಲಿ ರೋಡ್‌ ರೇಜ್‌ ಪ್ರಕರಣಗಳು ಹೆಚ್ಚಾಗುತ್ತಿದೆ ಎನ್ನುವ ಅಭಿಪ್ರಾಯಗಳು ಕೇಳಿ ಬಂದಿವೆ.

ಇತ್ತೀಚಿನ ಸುದ್ದಿ

Exit mobile version