ಲಿಫ್ಟ್ ನಲ್ಲಿ ಕುಸಿದು ಬಿದ್ದು ಹೊಟೇಲ್ ಸಿಬ್ಬಂದಿ ದಾರುಣ ಸಾವು
26/09/2023
ಉಡುಪಿ: ಉಡುಪಿ ಕರಾವಳಿ ಬೈಪಾಸ್ ನಲ್ಲಿರುವ ಮಣಿಪಾಲ ಇನ್ ಹೊಟೇಲಿನ ಸಿಬ್ಬಂದಿಯೊಬ್ಬರು ಲಿಫ್ಟ್ ನಲ್ಲಿ ಕುಸಿದು ಬಿದ್ದು ಮೃತಪಟ್ಟ ಘಟನೆ ಸೆ.25ರಂದು ನಡೆದಿದೆ.
ಮೃತರನ್ನು ಹೋಟೆಲಿನ ಬಾರ್ ಕ್ಯಾಪ್ಟನ್ ರಾಜ್(51) ಎಂದು ಗುರುತಿಸಲಾಗಿದೆ. ಇವರು ಹೊಟೇಲಿನ 8ನೇ ಮಹಡಿಗೆ ಲಿಫ್ಟ್ನಲ್ಲಿ ಹೋಗುತ್ತಿದ್ದಾಗ ಕುಸಿದು ಬಿದ್ದರು.
ತೀವ್ರವಾಗಿ ಅಸ್ವಸ್ಥಗೊಂಡಿದ್ದ ಇವರು ಆಸ್ಪತ್ರೆಗೆ ಸಾಗಿಸುವ ದಾರಿ ಮಧ್ಯೆ ಮೃತಪಟ್ಟರು. ಈ ಬಗ್ಗೆ ಉಡುಪಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.