ಬೋಟ್ ಗೆ ಬಡಿದ ಮರದ ದಿಮ್ಮಿ: ಮೀನುಗಾರಿಕಾ ಬೋಟ್ ಮುಳುಗಡೆ - Mahanayaka

ಬೋಟ್ ಗೆ ಬಡಿದ ಮರದ ದಿಮ್ಮಿ: ಮೀನುಗಾರಿಕಾ ಬೋಟ್ ಮುಳುಗಡೆ

gangolli
10/01/2025

ಉಡುಪಿ: ನೀರಿನಲ್ಲಿ ತೇಲಿ ಬಂದ ಮರದ ದಿಮ್ಮಿಯೊಂದು ಮೀನುಗಾರಿಕಾ ಬೋಟ್ ಗೆ ಡಿಕ್ಕಿ ಹೊಡೆದ ಪರಿಣಾಮ ಬೋಟ್ ಭಾಗಶಃ ಮುಳುಗಿ ಲಕ್ಷಾಂತರ ರೂಪಾಯಿ ನಷ್ಟವಾಗಿರುವ ಘಟನೆ  ಉಡುಪಿ ಜಿಲ್ಲೆಯ ಮಲ್ಪೆಯಲ್ಲಿ ನಡೆದಿದೆ.

ಸಂಜಾತ ಎಂಬವರ ಮಾಲಿಕತ್ವದ ತವಕಲ್ ಎಂಬ ಮೀನುಗಾರಿಕಾ ಬೋಟ್ ಮುಳುಗಡೆಯಾದ ಬೋಟ್ ಎಂದು ತಿಳಿದು ಬಂದಿದೆ. ಜನವರಿ 4ರಂದು ಈ ಬೋಟ್ ನ್ನು ದುರಸ್ತಿಗಾಗಿ ರವಿ ಸಾಲ್ಯಾನ್ ಹಾಗೂ ಹರೀಶ್ ಎಂಬವರು ಮಲ್ಪೆ ಬಂದರಿನಿಂದ ಗಂಗೊಳ್ಳಿಗೆ ಕೊಂಡೊಯ್ಯುತ್ತಿದ್ದ ವೇಳೆ ಈ ದುರ್ಘಟನೆ ನಡೆದಿದೆ.


ADS

ಗಂಗೊಳ್ಳಿ ಬಂದರ್ ನ ಅಳಿವೆಯಿಂದ 2 ನಾಟಿಕಲ್ ಮೈಲು ದೂರದಲ್ಲಿ ಈ ದುರ್ಘಟನೆ ನಡೆದಿದೆ. ಬೋಟ್ ಗೆ ಮರದ ದಿಮ್ಮಿ ಡಿಕ್ಕಿ ಹೊಡೆದ ಪರಿಣಾಮ ಬೋಟ್ ನ ಮುಂಭಾಗಕ್ಕೆ ಹಾನಿಯಾಗಿದ್ದು, ನೀರು ಬೋಟ್ ನ ಒಳಗೆ ನುಗ್ಗಿದೆ.

ನೀರಿನ ಒಳ ಹರಿವು ತೀವ್ರಗೊಂಡ ಪರಿಣಾಮ ಬೋಟ್ ಮುಳುಗುವ ಸ್ಥಿತಿಗೆ ತಲುಪಿದ ವೇಳೆ ಮಾಹಿತಿ ಪಡೆದ ಮೀನುಗಾರರು ಜಲರಾಣಿ ಎಂಬ ಬೋಟ್ ನ್ನು ರವಾನಿಸಿ ಬೋಟ್ ನಲ್ಲಿದ್ದ ಇಬ್ಬರನ್ನು ರಕ್ಷಣೆ ಮಾಡಿದ್ದಾರೆ ಎನ್ನಲಾಗಿದೆ.


ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 9686399493ನಂಬರ್ ಸೇರಿಸಿ.

ಗ್ರೂಪ್ ಗೆ ಜಾಯಿನ್ ಆಗಿ:

https://chat.whatsapp.com/Ci8F6ckDmAbCBQyqgLqOPx

ಇತ್ತೀಚಿನ ಸುದ್ದಿ