ಫೋಟೋ ತೆಗೆದುಕೊಳ್ಳುವ ನೆಪದಲ್ಲಿ ನಟಿಗೆ ಮುತ್ತಿಕ್ಕಲು ಯತ್ನಿಸಿದ ವ್ಯಕ್ತಿ!

poonam pandey
23/02/2025

ಸಾಕಷ್ಟು ನಟಿಯರು ಅಭಿಮಾನಿಗಳಿಂದ ಅಂತರ ಕಾಯ್ದುಕೊಳ್ಳಯತ್ತಾರೆ. ಯಾಕಂದ್ರೆ, ಸಾರ್ವಜನಿಕ ಸ್ಥಳಗಳಲ್ಲಿ ಅವರು ಸಾಕಷ್ಟು ಅಹಿತಕರ ಸಂದರ್ಭಗಳನ್ನು ಎದುರಿಸುತ್ತಿರುತ್ತಾರೆ. ಪ್ರಸಿದ್ಧ ಮಾಡೆಲ್ ಪೂನಂ ಪಾಂಡೆ ಸಾಮಾನ್ಯವಾಗಿ ಎಲ್ಲ  ಅಭಿಮಾನಿಗಳಿಗೂ ಫೋಟೋ ತೆಗೆದುಕೊಳ್ಳಲು ಅನುಮತಿ ನೀಡುತ್ತಾರೆ. ಆದರೆ ಇಲ್ಲೊಬ್ಬ ಅಭಿಮಾನದ ಹೆಸರಿನಲ್ಲಿ ಬಂದು ನಟಿಗೆ ಕಿರುಕುಳ ನೀಡಿರುವ ಘಟನೆ ನಡೆದಿದೆ.

ಪೂನಂ ಪಾಂಡೆ ಅಭಿಮಾನಿಗಳೊಂದಿಗೆ ಫೋಟೋಗೆ ಪೋಸು ನೀಡುತ್ತಿದ್ದರು. ಇದೇ ವೇಳೆ  ವ್ಯಕ್ತಿಯೊಬ್ಬ ಫೋಟೋ ತೆಗೆದುಕೊಳ್ಳುವ ನೆಪದಲ್ಲಿ ಬಂದು ನಟಿಗೆ ಕಿಸ್ ಮಾಡಲು ಯತ್ನಿಸಿದ್ದಾನೆ. ಈ ವಿಡಿಯೋ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

ವ್ಯಕ್ತಿಯ ಅತಿರೇಕದ ವರ್ತನೆ ವಿರುದ್ಧ ಸಾರ್ವಜನಿಕರಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. ವ್ಯಕ್ತಿಯ ವರ್ತನೆಯಿಂದ ನಟಿ ಕೆಲಕಾಲ ಶಾಕ್ ಆದರು. ಇದೇ ವೇಳೆ ನಟಿಯ ಜೊತೆಗಿದ್ದವರು ಆ ವ್ಯಕ್ತಿಯನ್ನು ಹಿಂದಕ್ಕೆ ತಳ್ಳಿದರು.

ನಟಿಯ ಜೊತೆಗೆ ಅತಿರೇಕದ ವರ್ತನೆ ತೋರಿದ್ದ ವ್ಯಕ್ತಿ ಕುಡಿತದ ಮತ್ತಿನಲ್ಲಿದ್ದ ಎಂದೂ ಹೇಳಲಾಗಿದೆ. ಸದ್ಯ ಸಾಮಾಜಿಕ ಜಾಲತಾಣಗಳಲ್ಲಿ ಈ ವಿಡಿಯೋ ವೈರಲ್ ಆಗುತ್ತಿದೆ.


ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 9686399493ನಂಬರ್ ಸೇರಿಸಿ.

ಗ್ರೂಪ್ ಗೆ ಜಾಯಿನ್ ಆಗಿ:

https://chat.whatsapp.com/BR3b3qhWZWaCzpD1m6N5uu

ಇತ್ತೀಚಿನ ಸುದ್ದಿ

Exit mobile version