ತಾಯಿಯ ಚಿಕಿತ್ಸೆಗೆ ಹಣವಿಲ್ಲದೇ ಎಟಿಎಂ ದೋಚಲು ಯತ್ನಿಸಿದ ವ್ಯಕ್ತಿ

21/08/2023
ಲಕ್ನೋ: ಎಟಿಎಂ ದೋಚಲು ಯತ್ನಿಸುತ್ತಿದ್ದ ವೇಳೆ ವ್ಯಕ್ತಿಯೋರ್ವ ಪೊಲೀಸರಿಗೆ ಸಿಕ್ಕಿ ಬಿದ್ದಿದ್ದಾನೆ. ಆದ್ರೆ.. ಆತ ಕಳ್ಳತನ ಮಾಡಲು ಕಾರಣ ಏನು ಎಂದು ತಿಳಿದಾಗ ಸ್ವತಃ ಪೊಲೀಸರೇ ಶಾಕ್ ಆಗಿದ್ದಾರೆ.
ಹೌದು.. ಉತ್ತರ ಪ್ರದೇಶದ ನವಾಬ್ ಗಂಜ್ ನ ಕೆನರಾ ಬ್ಯಾಂಕ್ ಎಟಿಎಂ ದರೋಡೆ ಮಾಡಲು ಯತ್ನಿಸುತ್ತಿದ್ದ ವೇಳೆ ಸುಭಾಮ್ ಎಂಬ ವ್ಯಕ್ತಿಯನ್ನು ಪೊಲೀಸರು ಬಂಧಿಸಿದ್ದಾರೆ. ಬೆಂಗಳೂರಿನ ಕೆನರಾ ಬ್ಯಾಂಕ್‌ನ ಕಂಟ್ರೋಲ್ ರೂಂ ಕಾನ್ಪುರ ಪೊಲೀಸರಿಗೆ ಮಾಹಿತಿ ನೀಡಿದಾಗ ಸುಭಮ್ ಬೆಳಗಿನ ಜಾವ 3 ಗಂಟೆ ಸುಮಾರಿಗೆ ಎಟಿಎಂ ಕಿಯೋಸ್ಕ್‌ಗೆ ಬಂದು ಯಂತ್ರವನ್ನು ಕಟ್ ಮಾಡಲು ಪ್ರಯತ್ನಿಸಿದ್ದಾನೆ.
ಕಳ್ಳತನ ಮಾಡಿದ್ದೇಕೆ ಎಂದು ಪೊಲೀಸರು ಪ್ರಶ್ನಿಸಿದಾಗ, ಹಣಗಳಿಸುವ ಎಲ್ಲ ಪ್ರಯತ್ನಗಳ ಬಳಿಕ ಎಟಿಎಂ ದೋಚಲು ಯತ್ನಿಸಿದ್ದು, ನನ್ನ ಬಂಧನಕ್ಕೆ ನನಗೆ ಬೇಸರವಿಲ್ಲ, ಆದ್ರೆ.. ತಾಯಿಯ ಚಿಕಿತ್ಸೆಗೆ ಹಣ ಹೊಂದಿಸಲು ಸಾಧ್ಯವಾಗಲಿಲ್ಲ ಎನ್ನುವ ನೋವಿದೆ ಎಂದಿದ್ದಾನೆ. ಅಂದ ಹಾಗೆ ಸುಭಾಮ್ ಗೆ ಯಾವುದೇ ಅಪರಾಧ ಇತಿಹಾಸವಿಲ್ಲ.